ರಾಜಕೀಯ

ಉಲ್ಟಾಹೊಡೆದ ಜಾತಿ ಸಮೀಕರಣ: ಆಹಿಂದ ವೋಟ್ ಬ್ಯಾಂಕ್ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್!

Shilpa D
ಬೆಂಗಳೂರು:  ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗ ಹಾಗೂ ಉಪ ಜಾತಿಗಳ ಓಲೈಕೆಗೆ ಪ್ರಯತ್ನಿಸುತ್ತಿರುವುದು ಹಾಗೂ ಕಾಂಗ್ರೆಸ್ ಮಿಸ್ ಮ್ಯಾನೇಜ್ ಮೆಂಟ್ ನಿಂದಾಗಿ ಕಾಂಗ್ರೆಸ್ ವೋಟ್ ಬ್ಯಾಂಕ್ ಎಂದೇ ಪರಿಗಣಿತವಾಗಿದ್ದ ಅಹಿಂದ ಕಾಂಗ್ರೆಸ್ ಕೈ ತಪ್ಪುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ವಾಗಿರುವ ಮಾದರಿ ಇದಕ್ಕೆ ಸಾಕ್ಷಿಯಾಗಿದೆ.
ಹಿಂದುಳಿದ ವರ್ಗಗಳ ನಾಯಕರು ಅದರಲ್ಲೂ ಸಿದ್ದರಾಮಮಯ್ಯ ಅವರಿಂದ ಅಹಿಂದ ನಿಷ್ಠಾವಂತರು ದೂರ ಸರಿಯುತ್ತಿದ್ದಾರೆ, ಕುರುಬ ಸಮುದಾಯ ಹೊರತು ಪಡಿಸಿದರೇ ಪರಿಶಿಷ್ಟ ಜಾತಿಯ ಮತಗಳನ್ನು ಕಾಂಗ್ರೆಸ್ ಕಳೆದು ಕೊಂಡಿದೆ. ಬೇರೆ ಯಾವುದೇ ಹಿಂದುಳಿದ ವರ್ಗಗಳು ಒಗ್ಗೂಡಿ ಈ ಬಾರಿ ಪಕ್ಷಕ್ಕೆ ಮತ ಚಲಾಯಿಸಿಲ್ಲ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಮುಸ್ಲಿಂ ಸಮುದಾಯ ಮಾತ್ರ ನಮಗೆ ಪೂರ್ಣ ಪ್ರಮಾಣದಲ್ಲಿ ಮತ ಚಲಾಯಿಸಿದೆ ಎಂದು  ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ವಿವರಿಸಿದ್ದಾರೆ.
2008 ಕ್ಕೆ ಹೋಲಿಸಿದರೇ ಉತ್ತರ ಕರ್ನಾಟಕದಲ್ಲಿ ನಾವು 11 ಸೀಟುಗಳನ್ನು ಪಡೆದುಕೊಂಡಿದ್ದೇವೆ,  ಈ ಭಾಗದಲ್ಲಿ ನಮ್ಮ ಪಕ್ಷದ ಸೀಟುಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.
ಈ ಬಾರಿ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗ ಶಾಸಕರು ಸಚಿವರಾಗಿರುವುದು ಮತ್ತೊಂದು ಪ್ರಬಲ ಲಿಂಗಾಯತ ಸಮುದಾಯ ನಿರಾಶೆಗೊಂಡಿದೆ. ಲಿಂಗಾಯತ ಪ್ರಭಾವಿ ನಾಯಕ ಬಿ.ಎಸ್ ಯಡಿಯೂರಪ್ಪ ತಮ್ಮನ್ನು ತಾವು ಮಾಸ್ ಲೀಡರ್ ಎಂದು ಬಿಂಬಿಸಿಕೊಂಡಿದ್ದಾರೆ.
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಮತ್ತಷ್ಟು ಮತಗಳು ಹಂಚಿಗೆಯಾಗುವ ಭಯ ಕಾಂಗ್ರೆಸ್ ಗೆ ಕಾಡುತ್ತಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ನಾಯಕರು, ಕಾರ್ಯಕರ್ತರು ಮತ್ತು ಮತದಾರರು ಬಿಜೆಪಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. 
ಹಳೇ ಮೈಸೂರು ಪ್ರಾಂತ್ಯದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಲಿಂಗಾಯತ ಮತದಾರರಿದ್ದರು ಕಾಂಗ್ರೆಸ್ ನಿಂದ ಒಬ್ಬರೇ ಒಬ್ಬ ಶಾಸಕ, ಎಂಎಲ್ ಸಿ ಮತ್ತು ಸಂಸದರು ಆಯ್ಕೆಯಾಗಿಲ್ಲ, ಉತ್ತರ ಕರ್ನಾಟಕದ ಮುಖಂಡರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ನಿರಾಕರಿಸಿರುವುದು ಆ ಭಾಗದ ಜನ ಮತ್ತಷ್ಟು ಅಸಮಾಧಾನ ಹೊರ ಹಾಕಿದ್ದಾರೆ.
ಎಲ್ಲಿ ತಮ್ಮ ಜಾತಿ ಸಮೀಕರಣ ತಪ್ಪಾಗಿದೆ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷ ವಿಶ್ಲೇಷಣೆ ನಡೆಸುತ್ತಿದೆ. ಸಮುದಾಯ, ವರ್ಗ ಜಾತಿ ಆಧಾರಿತ ಮತಗಳ ಹಂಚಿಕೆ ಬಗ್ಗೆ ವರದಿ ತಯಾರಿಸಿ ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗೆ ನೀಡಲಾಗುತ್ತದೆ, 
ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ನಾವು ಆತ್ಮಾವಲೋಕನ ಸಭೆ ನಡೆಸಿ, ಎಲ್ಲಿ ನಾವು ಎಡವಿದ್ದೇವೆ ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದು ಸಚಿವ ಡಿ,ಕೆ ಶಿವಕುಮಾರ್ ಹೇಳಿದ್ದಾರೆ. 
SCROLL FOR NEXT