ರಾಜಕೀಯ

ಕರಾವಳಿ ಜಿಲ್ಲೆಗಳ ಬಗ್ಗೆ ಸಿಎಂ ಮಲತಾಯಿ ಧೋರಣೆ: ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ

Manjula VN
ಮಂಗಳೂರು: ರಾಜ್ಯದಲ್ಲಿ ತಾಯಿ ಸ್ಥಾನದಲ್ಲಿಲಬೇಕಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕರಾವಳಿ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಅನುಸರಿಸಿದ್ದಾರೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಶನಿವಾರ ಹೇಳಿದ್ದಾರೆ. 
ಕೊಡಿಯಾಲ್ಬೆಲ್'ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಿರುವುದನ್ನು ನೋಡಿದರೆ, ಶಿಕ್ಷಣ ಹಾಗೂ ಇತರೆ ಕ್ಷೇತ್ರಗಳ ಕುರಿತಂತೆ ಸರ್ಕಾರಕ್ಕಿರುವ ಉದ್ದೇಶಗಳು ಇಲ್ಲಿಯೇ ತಿಳಿಯುತ್ತಿದೆ. ಶಿಕ್ಷಣ ಕ್ಷೇತ್ರ ಸರಿಯಾಕಿ ಕಾರ್ಯನಿರ್ವಹಿಸುತ್ತಿಲ್ಲ. ಏಕೆಂದರೆ, ಸರ್ಕಾರ ಟಿಎಂಎ ಪೈ ಸೇರಿದಂತೆ ಹಲವು ಶಿಕ್ಷಣ ತಜ್ಞರನ್ನು ಹೊಂದಿದೆ ಎಂದು ವ್ಯಂಗ್ಯವಾಡಿದ್ದಾರೆ. 
ವಿದ್ಯುತ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. ಒಳನಾಡಿನ ಮೀನುಗಾರಿಕೆಗೆ ಮಾತ್ರ ಅನುದಾನಗಳನ್ನು ಮೀಸಲಿಟ್ಟಿದ್ದಾರೆ. 300 ಕಿ.ಮೀ ದೂರದಲ್ಲಿರುವ ಮೀನುಗಾರರ ಸಮಸ್ಯೆಗಳು ಸಿಎಂ ಗಮನಕ್ಕೆ ಬಂದೇ ಇಲ್ಲ. ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ದೂರ ದೃಷ್ಟಿಗಳಿಲ್ಲದಿರುವುದು ಬಜೆಟ್ ನಿಂದಲೇ ತಿಳಿಯುತ್ತಿದೆ ಎಂದು ಹೇಳಿದ್ದಾರೆ. 
ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, 253 ಇಂದಿರಾ ಕ್ಯಾಂಟೀನ್ ಗಳಲ್ಲಿ 73 ಕ್ಯಾಂಟೀನ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಿದ್ದು ಸರ್ಕಾರದ ಕಾರ್ಯಕ್ರಮಗಳು ಮುಂದುವರೆಯುವ ಯಾವುದೇ ನಂಬಿಕೆಗಳಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT