ರಾಜಕೀಯ

ಡಿಕೆ ಶಿವಕುಮಾರ್‌ಗೆ ಕರೆ ಮಾಡಿ 4 ಶಾಸಕರನ್ನು ಕಳುಹಿಸಿ ಎಂದಿದ್ದರು ಅಮಿತ್ ಶಾ: ಸಿಎಂ ಲಿಂಗಪ್ಪ ಆರೋಪ

Shilpa D
ರಾಮನಗರ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 4 ಮಂದಿ ಶಾಸಕರನ್ನು ಕಳುಹಿಸಿಕೊಡುವಂತೆ  ಕೇಳಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎಂ ಲಿಂಗಪ್ಪ  ಬಾಂಬ್ ಸಿಡಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ ಶಾಸಕರಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಆಶ್ರಯ ನೀಡಿದ್ದ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶಿವಕುಮಾರ್‌ ಅವರಿಗೆ ಕರೆ ಮಾಡಿದ್ದರು,  4 ಜನ ಶಾಸಕರನ್ನ ಮಾತ್ರ ಕಳುಹಿಸಿ ಕೊಡಿ ಎಂದು ಕೇಳಿದ್ದರು. ಆದರೆ ಶಿವಕುಮಾರ್‌ ಇದಕ್ಕೆ ಒಪ್ಪಿರಲಿಲ್ಲ. ಯಾರನ್ನೂ ಕಳುಹಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಾದ ನಾಲ್ಕು ದಿನದಲ್ಲಿ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮಾಡಲಾಯಿತು ಎಂದು ಆರೋಪಿಸಿದ್ದಾರೆ.
ಕೇಂದ್ರದ ಎನ್‌ಡಿಎ ಸರಕಾರ ಯಾವ ರೀತಿ ಅಧಿಕಾರ ನೀಡುತ್ತಿದೆ ಎಂದು ಎಲ್ಲರಿಗೂ ತಿಳಿದು ಬಂದಿದೆ. ಪೆಟ್ರೋಲ್‌ ಬೆಲೆಯನ್ನು ಏರಿಕೆ ಮಾಡಿ, 1 ಪೈಸೆಯಷ್ಟು ಇಳಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆಗೆ ಈಡಾಗಿದ್ದಾರೆ. ಚುನಾವಣೆ ಸಮಯದಲ್ಲೂ ಕಾಂಗ್ರೆಸ್‌ ನಾಯಕರನ್ನು ಐಟಿ ಅಧಿಕಾರಿಗಳು ಗುರಿಯಾಗಿಸಿದ್ದಾರೆ. ಐಟಿ ದಾಳಿ ಮಾಡಿದ ಸಮಯ ಸರಿಯಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಜನರು ತಿರಸ್ಕಾರದ ಮನೋಭಾವ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
SCROLL FOR NEXT