ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಎಂ.ಬಿ. ಪಾಟೀಲ್ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ಭೇಟಿ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ಏನಿತ್ತೊ , ಅದೆಲ್ಲವನ್ನೂ ರಾಹುಲ್ ಗಾಂಧಿ ಅವರ ಬಳಿ ಪ್ರಸ್ತಾಪಿಸಿದ್ದೇನೆ. ರಾಹುಲ್ ಗಾಂಧಿ ಕೂಡಾ ತಾಳ್ಮೆಯಿಂದ ಕೇಳಿದ್ದಾರೆ. ನಾನು ನೀಡಿದ್ದ ಮಾಹಿಯಿಂದ ರಾಹುಲ್ ಗಾಂಧಿ ಕೂಡಾ ಸಂತೋಷಗೊಂಡಿದ್ದಾರೆ ಎಂದು ತಿಳಿಸಿದರು.