ರಾಜಕೀಯ

ರಾಜಕೀಯ ಹೈಡ್ರಾಮಾ ಬಳಿಕ ಕೊನೆಗೂ ಕರ್ತವ್ಯಕ್ಕೆ ಹಾಜರಾಗಲಿರುವ ಸಚಿವರು

Sumana Upadhyaya

ಬೆಂಗಳೂರು: ಸುಮಾರು ಒಂದು ತಿಂಗಳ ರಾಜ್ಯ ರಾಜಕೀಯದ ಹೈಡ್ರಾಮಾ ನಂತರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಾಳೆಯಿಂದ ಕಾರ್ಯಾರಂಭ ಮಾಡಲಿದೆ. ನಿನ್ನೆ ಮತ್ತು ಇಂದು ಬಹುತೇಕ ಸಚಿವರು ತಮ್ಮ ಕ್ಷೇತ್ರಗಳಿಗೆ ತೆರಳಿದ್ದು ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಎರಡನೇ ಶನಿವಾರವಾದ ಕಾರಣ ನಿನ್ನೆ ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ಇತರ ಸಿಬ್ಬಂದಿ ಕೂಡ ರಜೆಯಲ್ಲಿದ್ದರು. ನಾಳೆಯಿಂದ 25 ಸಂಪುಟ ದರ್ಜೆ ಸಚಿವರು ಕೆಲಸ ಮಾಡಲು ಆರಂಭಿಸುತ್ತಾರೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

25 ಸಚಿವರುಗಳಲ್ಲಿ 14 ಸಚಿವರು ಕಾಂಗ್ರೆಸ್ ನಿಂದ ಮತ್ತು 9 ಜಾತ್ಯತೀತ ಜನತಾದಳದವರಾಗಿದ್ದು ಒಬ್ಬರು ಬಹುಜನ ಸಮಾಜ ಪಕ್ಷದಿಂದ ಮತ್ತು ಇನ್ನೊಬ್ಬರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದವರಾಗಿದ್ದಾರೆ. ಈ ಪಕ್ಷದವರು ಸಮ್ಮಿಶ್ರ ಸರ್ಕಾರದ ಮೈತ್ರಿ ಅಭ್ಯರ್ಥಿಗಳಾಗಿದ್ದಾರೆ.

SCROLL FOR NEXT