ರಾಜಕೀಯ

ಪರಮೇಶ್ವರ್ ಗೆ ಹಲವು ಹುದ್ದೆಗಳು: ನಿಭಾಯಿಸಲು ಸಾಧ್ಯವೇ?

Sumana Upadhyaya

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದು ಜವಬ್ದಾರಿ ಮತ್ತು ಕರ್ತವ್ಯಗಳನ್ನು ಪೂರೈಸಲು ಗೃಹ ಸಚಿವ ಹುದ್ದೆಗೆ ನಿವೃತ್ತಿ ಪಡೆದ ಕೇವಲ ಒಂದು ವರ್ಷದಲ್ಲಿ ಕೊರಟಗೆರೆ ಕ್ಷೇತ್ರದ ಶಾಸಕರಾಗಿರುವ ಡಾ.ಜಿ.ಪರಮೇಶ್ವರ್ ನೂತನ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಹೊಂದುವ ಅವಕಾಶವನ್ನು ಪಡೆದಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಇನ್ನೊಂದೆಡೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಮತ್ತು ಗುಪ್ತಚರ ಇಲಾಖೆಯನ್ನು ಹೊರತುಪಡಿಸಿ ಗೃಹ ಖಾತೆಗಳು ಕೂಡ ಸಿಕ್ಕಿವೆ. ಈ ಎಲ್ಲಾ ಹುದ್ದೆಗಳಿಗೆ ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯಂತೂ ಇನ್ನೂ ಮುಖ್ಯ. ಇವೆಲ್ಲವೂ ಪರಮೇಶ್ವರ್ ಅವರಿಗೆ ಪ್ರಾಪ್ತವಾಗಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಮುಖಂಡರುಗಳ ನಡುವಿನ ಭಿನ್ನಾ ಭಿಪ್ರಾಯಗಳಿಂದ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಮುಖಂಡರನ್ನು ಕಾಂಗ್ರೆಸ್ ನೇಮಕ ಮಾಡಲಿದ್ದು, ಬೇರೆ ಹುದ್ದೆಗಳು ಪರಮೇಶ್ವರ್ ಅವರ ಕೈ ತಪ್ಪಿ ಹೋಗುವುದು ಸದ್ಯದ ಮಟ್ಟಿಗೆ ಅಸಾಧ್ಯ. ತಜ್ಞರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗಬಹುದು. ಕೇವಲ ಒಬ್ಬ ವ್ಯಕ್ತಿ ಎರಡು ಮೂರು ಹುದ್ದೆಗಳನ್ನು ನಿಭಾಯಿಸುವುದು ಕಷ್ಟ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರೊ. ಮುಜಾಫರ್ ಆಜಾದಿ. ಬೆಂಗಳೂರು ನಗರ ಅವ್ಯಾಹತವಾಗಿ ಬೆಳೆಯುತ್ತಿದೆ. ರಾಜ್ಯದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಸಮಸ್ಯೆ ವಿಭಿನ್ನವಾಗಿದೆ. ಇಲ್ಲಿ ಕಸ ವಿಲೇವಾರಿಯಿಂದ ಹಿಡಿದು ಸಂಚಾರ ದಟ್ಟಣೆಯವರೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ ಎನ್ನುತ್ತಾರೆ ಅವರು.

ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕೂಡ ಗೃಹ ಸಚಿವರ ಕರ್ತವ್ಯವಾಗಿರುತ್ತದೆ. ಅದು ಕೂಡ ದೊಡ್ಡ ಜವಬ್ದಾರಿ ಎಂದರು.ಎರಡು ಮೂರು ಹುದ್ದೆಗಳನ್ನು ವಹಿಸಿಕೊಂಡಿರುವ ಪರಮೇಶ್ವರ್ ಗೆ ಬೆಂಗಳೂರು ನಗರದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದಿರಬಹುದು. ಇಲ್ಲಿನ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸೂಚಿಸುವ ಸಚಿವರು ಬೇಕಾಗುತ್ತದೆ ಎನ್ನುತ್ತಾರೆ ಪ್ರೊ ಆಜಾದಿ.

ಬೆಂಗಳೂರು ನಗರದ ಶಾಸಕರಿಗೆ ಬೆಂಗಳೂರು ನಗರಾಭಿವೃದ್ಧಿ ಹುದ್ದೆ ನೀಡಬೇಕಾಗಿತ್ತು. ಕಾಂಗ್ರೆಸ್ ಇಲ್ಲಿ 14 ಸೀಟುಗಳನ್ನು ಗೆದ್ದುಕೊಂಡಿದೆ. ಅದು ಬಿಟ್ಟು ಕೊರಟಗೆರೆ ಶಾಸಕರಾದ ಪರಮೇಶ್ವರ್ ಗೆ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಅವಶ್ಯಕತೆಯೇನಿತ್ತು ಎಂದು ಕೇಳುತ್ತಾರೆ ಕಾಂಗ್ರೆಸ್ ನ ಕೌನ್ಸಿಲರ್ ಒಬ್ಬರು.

SCROLL FOR NEXT