ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರ ಅಕ್ರೋಶ ಇನ್ನೂ ಕಡಿಮೆಯಾಗಿಲ್ಲ, ಕಾಂಗ್ರೆಸ್ ಶಾಸಕರ ಈ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಎಐಸಿಸಿ ಕೂಡ ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಎಲ್ಲಾ ರೀತಿಯ ಪ್ರಯತ್ನ ಪಡುತ್ತಿದೆ.
ಬೀದರ್ ಭಾಗದ ಅತೃಪ್ತ ಶಾಸಕಪ ಬಣ ಮಾಜಿ ಸಚಿವ ಎಚ್. ಕೆ ಪಾಟೀಲ್ ಅವರ ಬೆಂಗಳೂರಿನ ಮನೆಯಲ್ಲಿ ಸಭೆ ಸೇರಿದ್ದರು, ಅದಾದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕಮ್ ಠ್ಯಾಗೋರ್ ಭೇಟಿ ನಂತರ ಎಚ್. ಕೆ ಪಾಟೀಲ್ ಬಣ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಅಸಮಾಧಾನ ಅಂತ್ಯಗೊಳ್ಳಬೇಕಾದರೇ 3*3*2 ಸೂತ್ರ ಅನುಸರಿಸಬೇಕೆಂದು ತಿಳಿಸಿದೆ.
ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳನ್ನು ನೀಡಬೇಕು, ಅದರಲ್ಲಿ ಒಂದು ಲಂಬಾಣಿ ಸಮುದಾಯಕ್ಕೆ ನೀಡಬೇಕು, ಲಂಬಾಣಿ ಜನಾಂಗದ ಉಮೇಶ್ ಜಾದವ್ ಅಥವಾ ಪರಮೇಶ್ವರ್ ನಾಯಕ್ ಅವರನ್ನು ಸಚಿವರನ್ನಾಗಿಸಬೇಕು. ಜೊತೆಗೆ ಮೂವರು ಶಾಸಕರನ್ನು ನಿಗಮ - ಮಂಡಳಿಗಳ ಅಧ್ಯಕ್ಷರನ್ನಾಗಿಸಬೇಕು. ಉತ್ತರ ಕರ್ನಾಯಕ ಇಬ್ಬರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಬೇಕೆಂಬ ಬೇಡಿಕೆ ಮುಂದಿಟ್ಟಿದೆ.
ಕಾಂಗ್ರೆಸ್ ಪಕ್ಷ ಯಾವಾಗಲೂ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಸಚಿವ ಸ್ಥಾನ ನೀಡದೇ ನಮ್ಮನ್ನು ಹೊರಗಿಡುತ್ತಿದೆ ಎಂಬ ಬಾವನೆ ಮೂಡಿದೆ.
ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕತೆ, ಜಾತಿ ಹಾಗೂ ಸಮುದಾಯಗಳಿಗೆ ಸಮತೋಲವಾದ ಪ್ರಾತಿನಿದ್ಯ ಸಿಗುವುದಿಲ್ಲ, ಒಂದು ವೇಳೆ ಸರಿಯಾದ ಪ್ರಾತಿನಿದ್ಯ ಸಿಗಲಿಲ್ಲವಾದರೇ ಮುಂಬರುವ ಲೋಕಸಬೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಹೇಳಿದೆ.
ಮೂವರಿಗೆ ಸಚಿವ ಸ್ಥಾನ ಮೂವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಹಾಗೂ ಇಬ್ಬರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ಕೇಳಿರುವುದು ಸತ್ಯ ಎಂದು ಎಚ್.ಕೆ ಪಾಟೇಲ್ ಅವರ ಆಪ್ತರೊಬ್ಹರು ಹೇಳಿದ್ದಾರೆ, ಒಂದು ವೇಳೆ ಪಕ್ಷ ನಮ್ಮ ಬೇಡಿಕೆ ಈಡೇರಿಸದಿದ್ದರೇ. ಲಂಬಾಣಿ. ಎಸ್ ಸಿ ಸೇರಿದಂತೆ ಉಳದ ಪರಿಶಿಷ್ಟ ಸಮುದಾಯಗಳ ವೋಟ್ ಬ್ಯಾಂಕ್ ಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಲಾಗಿದೆ.
ತಮಗೆ ಯಾವುದೇ ಅಸಮಾಧಾನವಿಲ್ಲ ಹಾಗೂ ಯಾವುದೇ ಅತೃಪ್ತ ಶಾಸಕರು ತಮ್ಮ ಸಂಪರ್ದಕಲ್ಲಿಲ್ಲ ಎಂದು ಎಚ್ ,ಕೆ ಪಾಟೀಲ್ ಹೇಳಿದ್ದಾರೆ, ಜಿಲ್ಲೆಯ ಹಲವು ಭಾಗಗಳಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ,ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿರುವ ನಾವು ಸಂತೋಷವಾಗಿದ್ದೇವೆ, ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಎರಡು ಮೂರು ದಿನ ತಡವಾಗಿ ಎಐಸಿಸಿ ಮಧ್ಯ ಪ್ರವೇಶಿಸಿತು, ಆದರೆ ಅಷ್ಟೇ ಶೀಘ್ರವಾಗಿ ಪರಿಸ್ಥಿತಿ ಅದ್ಯಯನ ಮಾಡಿ, ಸಮಸ್ಯೆ ಬಗೆಹರಿಸಿದೆ ಎಂದು ಪಾಟೀಲ್ ಹೇಳಿದ್ದಾರೆ..
ಶಾಸಕರುಗಳಾದ ಉಮೇಶ್ ಜಾಧವ್, ಎಸ್ ಎನ್ ಸುಬ್ಬಾರೆಡ್ಡಿ, ಈಶ್ವರ್ ಖಂಡ್ರೆ, ರಹಿಂ ಖಾನ್, ಶರಣ ಬಸಪ್ಪ ದರ್ಶನಾಪುರ್, ಅಮರೇಗೌಡ ಬಯ್ಯಾಪುರ, ಪರಮೇಶ್ವರ್ ನಾಯ್ಕ್ ಸೇರಿದಂತೆ ಹಲವರು ಸಚಿವ ಆಕಾಂಕ್ಷಿಗಳಾಗಿದ್ದರು. ರೋಷನ್ ಬೇಗ್ ಮತ್ತು ರಾಮಲಿಂಗಾ ರೆಡ್ಡಿ ಕೂಡ ಎಚ್.ಕೆ ಪಾಟೀಲ್ ಬಣಕ್ಕೆ ಬೆಂಬಲ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos