ಮೈಸೂರಿನಲ್ಲಿಂದು ಸಂಸದ ಪ್ರತಾಪ್ ಸಿಂಹ ಅವರಿಂದ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತ ಪುಸ್ತಿಕೆ ಸ್ವೀಕರಿಸಿದ ಭೈರಪ್ಪ 
ರಾಜಕೀಯ

ಮೋದಿ ಇನ್ನೂ ಎರಡು ಅವಧಿಗೆ ಆಯ್ಕೆಯಾದರೆ ಮಾತ್ರ ಭಾರತ ಉಳಿಯಲಿದೆ: ಎಸ್.ಎಲ್. ಭೈರಪ್ಪ

ಭಾರತಕ್ಕೆ ಮೋದಿ ಅವರ ಕೊಡುಗೆ ಅಪಾರವಾಗಿದೆ. ಇನ್ನೂ ಎರಡು ಬಾರಿ ಅವರು ಪ್ರಧಾನಿಯಾಗಿ ಆಯ್ಕೆಗೊಂಡರೆ ನಮ್ಮ ದೇಶ ಉಳಿಯಲಿದೆ

ಮೈಸೂರು: ಭಾರತಕ್ಕೆ ಮೋದಿ ಅವರ ಕೊಡುಗೆ ಅಪಾರವಾಗಿದೆ. ಇನ್ನೂ ಎರಡು ಬಾರಿ ಅವರು ಪ್ರಧಾನಿಯಾಗಿ ಆಯ್ಕೆಗೊಂಡರೆ ನಮ್ಮ ದೇಶ ಉಳಿಯಲಿದೆ ಎಂದು ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸಂಸದ ಪ್ರತಾಪ್ ಸಿಂಹ ಅವರಿಂದ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತ ಪುಸ್ತಿಕೆ ಸ್ವೀಕರಿಸಿದ ಭೈರಪ್ಪ "ಮೋದಿ ಕಳೆದ ನಾಲ್ಕ್ಯು ವರ್ಷಗಳಲ್ಲಿ ದೇಶವನ್ನು ಉತ್ತಮ ಹಾದಿಯಲ್ಲಿ ನಡೆಸಿದ್ದಾರೆ. ದೇಶ ಸಾಕಷ್ಟು ಅಭಿವೃದ್ದಿ ಕಂಡಿದೆ. ಭವಿಷ್ಯದಲ್ಲಿಯೂ ಸಹ ಅವರು ಇದೇ ರೀತಿ ಶ್ರಮಪಡಲಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸಬೇಕು ಎಂದರು.
"ಒಂದೊಮ್ಮೆ ಮೋದಿ ಈ ಚುನಾವಣೆಯಲ್ಲಿ ಸೋತರೆ ದೇಶದ ಭವಿಷ್ಯ ಏನಾಗುವುದೋ ಹೇಳಲು ಸಾಧ್ಯವಿಲ್ಲ. ಮೋದಿ ಅವರನ್ನು ಸೋಲಿಸಲು ಎರಡರಿಂದ ಮೂರು ಬಣಗಳು ಇತ್ತೀಚೆಗೆ ’ತಾವೆಲ್ಲ ಒಂದಾಗಿ’ ಪಣ ತೊಟ್ಟಿದ್ದಾರೆ. ಆದರೆ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ ಹಾಗು ಚೀನಾ ಮೋದಿ ಸರ್ಕಾರ, ಆಡಳಿತವಿರುವ ಕಾರಣ ವಿನಾಕಾರಣ ತಗಾದೆ ತೆಗೆಯದೆ ಸುಮ್ಮನಿದ್ದಾರೆ. ಹೀಗಿರಲು ಮೋದಿಯನ್ನು ಸೋಲಿಸುವುದು ಮೂರ್ಖತನವಾಗಲಿದೆ" ಭೈರಪ್ಪ ಹೇಳಿದರು.
’ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮದ ಅಂಗವಾಗಿ ಸಂಸದ ಪ್ರತಾಪ್ ಸಿಂಹ  ಮೈಸೂರು ಕುವೆಂಪುನಗರದ ಭೈರಪ್ಪನವರ ನಿವಾಸಕ್ಕೆ ಆಗಮಿಸಿ ಅವರಿಗೆ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಪುಸ್ತಿಕೆ ನೀಡಿದ್ದಾರೆ.ಜತೆಗೆ ಅವರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಾದ ಅಭಿವೃದ್ದಿ ಕಾರ್ಯದ ಕಿರುಹೊತ್ತಿಗೆಯನ್ನು ಸಹ ನೀಡಲಾಗಿದೆ.
"ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಯಾವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮೇಡಂ ಮಾತಿಗೆ ಕಾಯುತ್ತಿದ್ದರು. ಅಂತಹಾ ಪ್ರಧಾನಿ ನಮಗೆ ಅಗತ್ಯವಿದೆಯೆ? ಇದಲ್ಲದೆ ಮೋದಿ ಜಾಗತಿಕವಾಗಿ ಅನೇಕ ರಾಷ್ಟ್ರಗಳ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ ಎಂದು ಭೈರಪ್ಪ ಹೇಳಿದರು.
ಸಂಪರ್ಕ್ ಫಾರ್ ಸಮರ್ಥನ್ ಕಾರ್ಯಕ್ರಮದಡಿಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇಂದು ಖ್ಯಾತ ಸಾಹಿತಿ ಸಿಪಿ ಕೃಷ್ಣಕುಮಾರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಪ್ರಧಾನ ಸಂಪಾದಕರಾದ  ಕೆ.ಬಿ ಗಣಪತಿ, ಖ್ಯಾತ ಉದ್ಯಮಿಗಳಾದ ಗೋಪಿನಾಥ್ ಶೆಣೈ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕಿರು ಹೊತ್ತಿಗೆ ನಿಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT