ಖಾಸಗಿ ಸಂಭಾಷಣೆ ವಿಡಿಯೋವನ್ನು ಎಡಿಟ್ ಮಾಡಿ ಪ್ರಸಾರ ಮಾಡಿರುವುದು ಪತ್ರಿಕಾ ಧರ್ಮವಲ್ಲ: ಸಿದ್ದರಾಮಯ್ಯ
ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದನ ಹಾಗೂ ಮುಂದಿನ ಭಾಗಗಳನ್ನು ಕತ್ತರಿಸಲಾಗಿದ್ದು, ಈ ವಿಡಿಯೋವನ್ನು ಪ್ರಸಾರ ಮಾಡಿರುವುದು ಪತ್ರಿಕಾಧರ್ಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ...
ಬೆಂಗಳೂರು; ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದನ ಹಾಗೂ ಮುಂದಿನ ಭಾಗಗಳನ್ನು ಕತ್ತರಿಸಲಾಗಿದ್ದು, ಈ ವಿಡಿಯೋವನ್ನು ಪ್ರಸಾರ ಮಾಡಿರುವುದು ಪತ್ರಿಕಾಧರ್ಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಇದನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಹಗಲುಕ-ರಾತ್ರಿ ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.
ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ ಹಾಗೂ ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮವಲ್ಲ. ಇದನ್ನು ನಂಬಿ ಮೈತ್ರಿ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಬಾರದು, ನಿರ್ಲಕ್ಷಿಬೇಕು. ನನ್ನ ಖಾಸಗಿ ಸಂಭಾಷಣೆಯ ಎಡಿಟೆಡ್ ವಿಡಿಯೋ ಬಗ್ಗೆ ಶುಕ್ರವಾರದವರೆಗೂ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಿರುವಾಗ ಯು-ಟರ್ನ್, ಹಿ-ಟರ್ನ್ ಪ್ರಶ್ನೆ ಎಲ್ಲಿದೆ? ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೋ. ಅದರ ಹಿಂದೆ ಯಾರಿದ್ದರು ಎನ್ನುವುದನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.