ಲಿಂಗಾಯತ ಪ್ರತ್ಯೇಕ ಧರ್ಮ:ಸಿದ್ದರಾಮಯ್ಯನವ ರಾಜಕೀಯ ತಂತ್ರ ಫಲಿಸಲಿದೆಯೆ?
ಬೆಂಗಳೂರು: ಇದು ಸಿದ್ದರಾಮಯ್ಯನವರ ಜಾಣತನದ ರಾಜಕೀಯ ನಡೆಯೋ? ಅಥವಾ ಚುನಾವಣಾ ಸಮಯದಲ್ಲಿ ಸುಮ್ಮನಿರಲಾಗದೆ ತಾವೇ ಕಷ್ಟಗಳನ್ನು ಮೈಮೇಲೆಳುದುಕೊಳ್ಳುತ್ತಿರುವ ಪರಿಯೋ ತಿಳಿಯುತ್ತಿಲ್ಲ. ಕೆಲವರ ಪ್ರಕಾರ ಬಿಜೆಪಿ ಮತಬ್ಯಾಂಕ್ ಆಗಿದ್ದ ಲಿಂಗಾಯತ ಸಮುದಾಯದ ನಡುವೆ ದೊಡ್ಡ ಬಿರುಕೊಂದನ್ನು ಸಿದ್ದರಾಮಯ್ಯ ಮೂಡಿಸಿರುವುದಂತೂ ನಿಜ
ಸಂಪುಟ ಸದಸ್ಯರ ಭಿನ್ನಾಭಿಪ್ರಾಯಗಳು, ಕೆಲ ಮಠಾಧೀಶರ ಪ್ರತಿಭಟನೆಗಳ ನಡುವೆಯೂ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನವನ್ನು ನೀಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಕೇಂದ್ರದ ಮೋದಿ ಸರ್ಕಾರ ರಾಜ್ಯ ಸರ್ಕಾರರದ ಶಿಫಾರಸನ್ನು ಒಪ್ಪಿಕೊಳ್ಳಲಿದೆಯೆ ಎನ್ನುವುದು ತಿಳಿದಿಲ್ಲವಾದರೂ ಹಿಂದಿನಿಂಡಲೂ ಬಿಜೆಪಿಯನ್ನು ಬಲವಾಗಿ ಬೆಂಬಲಿಸುತ್ತಾ ಬಂದಿದ್ದ ಲಿಂಗಾಯತ ಸಮುದಾಯಕ್ಕೆ ಧರ್ಮ ಸ್ಥಾನ ಮಾನ ನೀಡುವ ಮೂಲಕ ಸಿದ್ದರಾಮಯ್ಯ ತಮ್ಮ ಗುರಿ ಸಾಧಿಸಿಕೊಂಡಿದ್ದಾರೆ ಎನ್ನುವುದು ಸತ್ಯ.
ಆದರೆ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸುತ್ತಿರುವ ಕೆಲ ಮಠಗಳ ಸ್ವಾಮಿಗಳ ಮೂಲಕ ಬಿಜೆಪಿ ಪ್ರಭಾವ ಬೀರಿ ಚುನಾವಣೆ ವೇಳೆಯಲ್ಲಿ ಇದನ್ನು ಪ್ರಮುಖ ವಿವಾದವನ್ನಾಗಿ ಬಳಸಿಕೊಳ್ಳಬಹುದು.ಸಿದ್ದರಾಮಯ್ಯ ಚುನಾವಣೆ ಲಾಭಕ್ಕಾಗಿ ಸಮುದಾಯವನ್ನು ವಿಭಜನೆ ಮಾಡಿದ್ದಾರೆಂದು ತೋರಿಸಲುಇ ಬಿಜೆಪಿ ಮುಂದಾಗಬಹುದು.
"ಲಿಂಗಾಯತ ಹಾಗೂ ವೀರಶೈವರ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳದ ದೊಡ್ಡ ಜನಸಮೂಹವಿದ್ದು ಇದೀಗ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಮಾಡುವ ಮೂಲಕ ಸಿದ್ದರಾಮಯ್ಯ ದೊಡ್ಡ ಅಪಾಯವನ್ನೇ ಎದುರು ಹಾಕಿಕೊಳ್ಳುತ್ತಿದ್ದಾರೆ" ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಹೇಳುತ್ತಾರೆ.
"ಕೆಲ ಸಮುದಾಯದ ಬೆಂಬಲವನ್ನು ಒಗ್ಗೂಡಿಸುವ ಮೂಲಕ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಲಿಂಗಾಯತ ಧರ್ಮದ ಶಿಫಾರಸು ಒಂದು ತಪ್ಪು ಕ್ರಮವಾಗಿದ್ದು ಇದು ಚುನಾವಣೆ ವೇಳೆಯಲ್ಲಿ ಪರಿನಾಮ ಬೀರುತ್ತದೆ" ಅವರು ಹೇಳಿದರು.
ಇಷ್ತಾಗಿಯೂ ಕಾಂಗ್ರೆಸ್ ಗೆ ಇದರಿಂಡ ಲಾಭವಾಗುವ ಸಾಧ್ಯತೆ ಇಲ್ಲದಿಲ್ಲ, ಸುಮಾರು "20 ರಿಂದ 30 ಸಮುದಾಯದ ಸದಸ್ಯರು ಪಕ್ಷವನ್ನು ಬೆಂಬಲಿಸಿದರೂ ಅದು 20 ರಿಂದ 25 ಸ್ಥಾನಗಳಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಚುನಾವಣೆಯಲ್ಲಿ ತೀವ್ರ ಹಣಾಹಣಿ ಏರ್ಪಡಿಅಲಿದೆ. ಅಲ್ಲದೆ ಯಾವ ಪಕ್ಷವೂ 113 ಎಂಬ ಮ್ಯಾಜಿಕ್ ಸಂಖ್ಯೆ ಗಳಿಸುವ ಸಾಧ್ಯತೆ ಕುಸಿಯಲಿದೆ
ಹಿರಿಯ ಪತ್ರಕರ್ತ, ನಾಗಮೋಹನ್ ದಾಸ್ ಸಮಿತಿ ಸದಸ್ಯರಾದ ಸರಜೂ ಕಾಟ್ಕರ್ ಹೇಳುವಂತೆ "ಇದರಿಂದ ಸಿದ್ದರಾಮಯ್ಯ ಏನನ್ನೂ ಕಳೆದುಕೊಳ್ಳುವುದಿಲ್ಲ, 10% ಲಿಂಗಾಯತರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದರೂ ಪಕ್ಷದ ಪಾಲಿಗೆ ಅದು ದೊಡ್ಡ ಲಾಭವೇ ಆಗಲಿದೆ" ಎನ್ನುತ್ತಾರೆ.
ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವು ಪ್ರಮುಖ ಚುನಾವಣಾ ವಿಷಯವಾಗಲಿದೆ. ಮುಂಬೈ ಕರ್ನಾಟಕ ಭಾಗದ ಲಿಂಗಾಯತ ಸಮುದಾಯ ಬಿಜೆಪಿಯ ಪ್ರಬಲ ಪ್ರತಿಪಾದಕರಾಗಿದ್ದು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೆಲ ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 40 ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 20ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ
"ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಾಂಗ್ರೆಸ್ ಗೆ ಅನುಕೂಲಕರಆಗಿ ಪರಿಣಮಿಸದು, ಇದು ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ ಎಂದು ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
"ಚುನಾವಣೆ ವೇಳೆ ಧರ್ಮ ವಿಭಜನೆಯನ್ನು ಪ್ರಮುಖ ಪ್ರಚಾರ ವಿಷಯವಾಗಿಸುವುದ ರ ಮೂಲಕ ಬಿಜೆಪಿಗೆ ಹೊಡೆತ ನೀಡಲು ಸಿದ್ದರಾಮಯ್ಯ ತಂತ್ರ ಹೂಡಿದ್ದಾರೆ. ಈ ಮೂಲಕ ಅವರು ಲಿಂಗಾಯತರ ಮನ ಗೆಲ್ಲುವ ಭರವಸೆ ಹೊಂದಿದ್ದಾರೆ. ಅವರು ತಮ್ಮ ಅಹಿಂದ ವನ್ನು ಅಹಿಂದ+ ಮಾಡಲು ಹೊರಟಿದ್ದಾರೆ. ಆದರೆ ಇದಕ್ಕೆ ಸಮಯ ಇದಲ್ಲ, ಸಿದ್ದರಾಮಯ್ಯ ತುಸು ತಡವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನಿಸುತ್ತಿದೆ. " ಇನ್ನೋರ್ವ ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.
'ಇತರ ಅಲ್ಪಸಂಖ್ಯಾತರು ಆತಂಕ ಪಡಬೇಕಾಗಿಲ್ಲ
"ಇತರ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮವಾಗಿಸುವ ಸಂಬಂಧ ಆತಂಕ ಹೊಂದಬೇಕಾಗಿಲ್ಲ. ಅಲ್ಪಸಂಖ್ಯಾತರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಪಡೆಯುತ್ತಿರುವ ಎಲ್ಲಾ ಸವಲತ್ತುಗಳು ಹಾಗೆಯೇ ಮುಂದುವರಿಯಲಿದೆ" ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವುದರಿಂದ ಮುಸ್ಲೀಂ ಹಾಗೂ ಕ್ರೈಸ್ತರ ವಿರೋಧ ಎದುರಿಸಬೇಕಾಗುವುದು ಎನ್ನುವ ಹಿನ್ನೆಲೆಯಲ್ಲಿ ಅವರು ಹೇಳಿಕೆ ನಿಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics