ರಾಜಕೀಯ

ಶಾಂತಿನಗರದಲ್ಲಿ ಹ್ಯಾರಿಸ್ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಸ್ಪರ್ಧೆ

Shilpa D
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರದಿಂದ ಸ್ಪರ್ಧಿಸಲು ಎನ್.ಎ ಹ್ಯಾರಿಸ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದರೇ ಅವರ ವಿರುದ್ಧ ತಾವು ಕಣಕ್ಕಿಳಿಯುವುದಾಗಿ ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಹೇಳಿದ್ದಾರೆ.
ರೇಣುಕಾ ವಿಶ್ವನಾಥನ್ 1971 ರ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದರೂ ದೆಹಲಿಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. 2008 ರಲ್ಲಿ ಆಗಿನ ರಾಷ್ಟ್ರಪತಿಯ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು.
 37 ವರ್ಷದ ಸೇವೆಯ ಅವಧಿಯಲ್ಲಿ  ಹಲವು ರಾಜಕೀಯ ಪಕ್ಷಗಳನ್ನು ಹಾಗೂ ಮುಖಂಡರನ್ನು ನೋಡಿದ್ದೇನೆ, ಅವರ ಜೊತೆ  ಕೆಲಸ ಮಾಡಿದ್ದೇನೆ, 2013 ರಲ್ಲಿ ಎಎಪಿ ಸೇರ್ಪಡೆಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ನಾನು ಭಾಗಿಯಾಗಿದ್ದೆ ಎಂದು ಹೇಳಿದ್ದಾರೆ. 
ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಆದಾಯ ಪ್ರಮಾಣಪತ್ರ ಪಡೆಯಲು ಎಷ್ಟು ಹಣ ಸಂದಾಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದೆ, 500ರು. 2000 ರು ಎಂಬ ಉತ್ತರಗಳು ಬಂದವು, ನಿಮ್ಮ ಪ್ರಕಾರ ಎಎಪಿ ಅಭ್ಯರ್ಥಿಗಳು  ಲಂಚ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದಾಗ ಅವರು ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. 
ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಕೃತ್ಯ ಖಂಡಿಸಿ ಆಮ್‌ ಆದ್ಮಿ ಪಕ್ಷವು ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ನಲಪಾಡ್‌  ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿತು. ಇದರಿಂದ ನಮ್ಮ ಬಗ್ಗೆ ಜನರಲ್ಲಿ ವಿಶ್ವಾಸ ಬಂದಿದೆ. ಆ ಬಳಿಕ ಪಕ್ಷಕ್ಕೆ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ರೇಣುಕಾ ವಿಶ್ವನಾಥ್‌ ಹೇಳಿದ್ದಾರೆ.
SCROLL FOR NEXT