ರಾಜಕೀಯ

ರಾಜ್ಯ ವಿಧಾನಸಭೆ ಚುನಾವಣೆ: ಇವಿಎಂ ಯಂತ್ರದಲ್ಲಿ ಅಭ್ಯರ್ಥಿ ಹೆಸರಿನ ಜೊತೆ ಭಾವಚಿತ್ರ?

Shilpa D
ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವೂ ಇರುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಉಪ ಚುನಾವಣಾಧಿಕಾರಿ ವಿ. ರಾಘವೇಂದ್ರ, ಮತದಾರರಿಗೆ ಅಭ್ಯರ್ಥಿಯ ಹೆಸರು ಗೊಂದಲ ಮೂಡಿಸದೇ ಇರಲಿ ಎಂಬ ಕಾರಣಕ್ಕಾಗಿ ಹೆಸರಿನ ಜೊತೆ ಅಭ್ಯರ್ಥಿಯ ಭಾವಚಿತ್ರವನ್ನು ಇವಿಎಂ ಯಂತ್ರಕ್ಕೆ ಅಳವಡಿಸಲಾಗುವುದು, ಇದರ ಜೊತೆಗೆ ಅಭ್ಯರ್ಥಿಗಳ ಪಕ್ಷದ ಚಿಹ್ನೆ ಹಾಗೂ ಸೀರಿಯಲ್ ನಂಬರ್ ಸಹ ಇರಲಿದೆ ಎಂದು ಹೇಳಿದ್ದಾರೆ.
ಈ ವ್ಯವಸ್ಥೆ 2016 ರಿಂದ ಜಾರಿಯಲ್ಲಿತ್ತು, ಆದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಮುಂದೆ ಇವಿಎಂ ಯಂತ್ರಗಳಲ್ಲಿ ಕೇವಲ ಅಭ್ಯರ್ಥಿಯ ಹೆಸರು , ಸೀರಿಯಲ್ ನಂಬರ್ ಹಾಗೂ ಪಕ್ಷದ ಚಿಹ್ನೆಗಳನ್ನು ಮಾತ್ರ  ಬ್ಯಾಲಟ್ ಪೇಪರ್ ಒಂದರಲ್ಲಿ ಹಾಕಲಾಗುತ್ತಿತ್ತು,  ‘ಮತ ಚಲಾಯಿಸಿದ 7 ಸೆಕೆಂಡ್‌ಗಳವರೆಗೆ ಮತ ಪಡೆದ ಅಭ್ಯರ್ಥಿಯ ವಿವರ ವಿ.ವಿ ಪ್ಯಾಟ್ ಯಂತ್ರದ ಗಾಜಿನ ಕಿಂಡಿಯಲ್ಲಿ ಮೂಡಿರುತ್ತದೆ. ಈ ವಿವರಗಳನ್ನು ಒಳಗೊಂಡ ಚೀಟಿಯು ಪ್ರತ್ಯೇಕ ಪೆಟ್ಟಿಗೆಯಲ್ಲಿ ಬೀಳುತ್ತದೆ. ಮತಯಂತ್ರದಲ್ಲಿ ದಾಖಲಾದ ಮತ ಹಾಗೂ ವಿವಿ ಪ್ಯಾಟ್‌ನಲ್ಲಿ ನಮೂದಾದ ಮತಗಳು ಪರಸ್ಪರ ತಾಳೆ ಆಗಬೇಕು’ ಎಂದರು.
ಮತಯಂತ್ರಗಳನ್ನು ಮೂರು ಹಂತಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಪರಿಶೀಲನೆ ನಡೆಸಲಾಗುತ್ತದೆ. ಬಿಗಿಭದ್ರತೆಯಲ್ಲಿ ಸಂರಕ್ಷಿಸಲಾಗುತ್ತದೆ‌. ಅವುಗಳಲ್ಲಿರುವ ತಂತ್ರಾಂಶವನ್ನು ಯಾವುದೇ ರೀತಿಯ ಇಂಟರ್‌ನೆಟ್, ಬ್ಲೂಟೂತ್ ಅಥವಾ ಪೋರ್ಟ್ ಮೂಲಕ ಸಂಪರ್ಕಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕಳೆದ ಲೋಕಸಭೆ ಮತ್ತು ಉತ್ತರ ಪ್ರದೇಶದ ಚುನಾವಣೆಯ ಬಳಿಕ ಇವಿಎಂ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ಆರೋಪ ಸಾಬೀತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಪರಿಶೀಲನೆ ಮಾಡಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಸಿದ್ಧಪಡಿಸಿದೆ. ಯಾವುದೇ ರೀತಿಯಲ್ಲೂ ಹ್ಯಾಕ್‌, ಟ್ಯಾಂಪರಿಂಗ್‌ ಮಾಡುವುದಕ್ಕೆ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ.
''ಇವಿಎಂ ಅನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದೆಂದು ಅಮೆರಿಕ ವೆಬ್‌ಸೈಟ್‌ ಸಂಸ್ಥೆ 2010ರಲ್ಲಿ ಮಾಡಿದ್ದ ಸಂದೇಶ ಇಂದಿಗೂ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳಿಗೆ ಯಾವುದೇ ರೀತಿಯಲ್ಲಿ ವೈಫೈ ಮತ್ತು ಇಂಟರ್‌ ನೆಟ್‌ ಸಂಪರ್ಕ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ಮತಯಂತ್ರದೊಂದಿಗೆ ಇನ್ನೊಂದು ಮತಯಂತ್ರ ಸಂಪರ್ಕವಿರುವುದಿಲ್ಲ. ಹೀಗಾಗಿ ಹ್ಯಾಕಿಂಗ್‌ಗೆ ಅವಕಾಶವಿಲ್ಲ  ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.
SCROLL FOR NEXT