ಬೆಂಗಳೂರು: "ಜೆಡಿ(ಎಸ್) ಕಾಂಗ್ರೆಸ್ಬಿ ನ ಬಿ-ಟೀಮ್ ಆಗಲಿದೆಯೆ ಎನ್ನುವುದನ್ನು ಕಾಲವೇ ತಿಳಿಸಲಿದೆ." ಮಾಜಿ ಪ್ರಧಾನಿ ಜೆಡಿ(ಎಸ್) ಪ್ರಧಾನ ಅಧ್ಯಕ್ಷ ದೇವೇಗೌಡ ಹೇಳಿದ್ದಾರೆ.
"ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದು, ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಾವು ಕಾಂಗ್ರೆಸ್ ಗೆ ಬಿ-ಟೀಮ್ ಆಗಿದ್ದವು. ಇದೀಗ ಮತ್ತೆ ನಾವು ಕಾಂಗ್ರೆಸ್ ಗೆ ಬಿ-ಟೀಮ್ ಆಗುವೆವೋ, ಕಾಂಗ್ರೆಸ್ ನಮಗೇ ಬಿ-ಟೀಮ್ ಆಗಲಿದೆಯೇ ಎನ್ನುವುದನ್ನು ನಾವು ನೋಡೋಣ" ದೇವೇಗೌಡ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ರಾಹುಲ್ ಗಾಂಧಿ "ಜೆಡಿ (ಎಸ್) ಅವರು ಬಿಜೆಪಿಯ ಬಿ-ಟೀಮ್ ಹೌದೇ ಅಥವಾ ಇಲ್ಲವೇ ಎಂದು ಸ್ಪಷ್ಟಪಡಿಸಬೇಕಾಗಿದೆ." ಎಂದಿದ್ದರು.
ಇದೇ ವೇಳೆ ದೇವೇಗೌಡರು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವನ್ನು ಹೊರತುಪಡಿಸಿ ಬೇರಾರೊಡನೆಯೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಮಾಯಾವತಿಯವರೊಡನೆ ಹೊರತು ಬೇರೆ ಯಾರೊಡನೆ ಚುನಾವಣೆ ಮೈತ್ರಿ ಇಲ್ಲ" ಅವರು ಹೇಳಿದರು.
ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಮತದಾನ ನಡೆಯಲಿದ್ದು ಮೇ 15 ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿದ್ದರೆ ದಕ್ಷಿಣ ರಾಜ್ಯದಲ್ಲಿ ಮತ್ತೆ ಪಾರಮ್ಯ ಸ್ಥಾಪಿಸಲು ಬಿಜೆಪಿ ಎಲ್ಲಾ ರೀತಿಯ ರಣತಂತ್ರವನ್ನೂ ಹೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics