ರಾಜಕೀಯ

ಭಾಷಣ ತಪ್ಪಾಗಿ ತರ್ಜುಮೆ ಮಾಡಿದ ಸಂಸದ: ಮತ್ತೆ ಮುಜುಗರಕ್ಕೊಳಗಾದ ಬಿಜೆಪಿ

Manjula VN
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದು ಕರೆಯುವ ಮೂಲಕ ತೀವ್ರ ಮುಜುಗರಕ್ಕೊಳಗಾಗಿದ್ದ ಬಿಜೆಪಿಗೆ ಮತ್ತೊಮ್ಮೆ ಮುಜುಕ್ಕೊಳಗಾದ ಘಟನೆ ನಡೆದಿದೆ.
ಹಿಂದಿಯಲ್ಲಿದ್ದ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುವ ಸಂದರ್ಭದಲ್ಲಿ ಬಿಜೆಪಿ ಸಂಸದರೊಬ್ಬರು ತಪ್ಪು ಮಾಡಿದ್ದು, ಈ ತಪ್ಪು ಇದೀಗ ಬಿಜೆಪಿ ವರಿಷ್ಠರ ಕಣ್ಣು ಕೆಂಪಗಾಗುವಂತೆ ಮಾಡಿದೆ. 
ಬಿಜೆಪಿ ಸಂಸದ ಪ್ಲಹ್ಲಾದ್ ಜೋಶಿಯವರು ತಪ್ಪಾಗಿ ಅನುವಾದ ಮಾಡಿದ ಪರಿಣಾಮ, ಬಡವರು ಹಾಗೂ ದಲಿತರಿಗೆ ಮೋದಿ ಸರ್ಕಾರ ಏನನ್ನೂ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ. 
ಯಡಿಯೂರಪ್ಪ ಅವರ ಕುರಿತಾಗಿ ಹಾಗೂ ಮೋದಿಯವರ ಕುರಿತಾಗಿ ಅಮಿತ್ ಶಾ ಅವರು ನೀಡಿರುವ ಎರಡೂ ಹೇಳಿಕೆಗಳ ವಿಡಿಯೋಗಳನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದು, ಬಿಜೆಪಿ ನಾಯಕರ ಹೇಳಿಕೆ ಕುರಿತು ವ್ಯಂಗ್ಯವಾಡುತ್ತಿದ್ದಾರೆ. 
ಇದರಂತೆ ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಯವರು, ಬಡವರು ಹಾಗೂ ದಲಿತರಿಗೆ ಪ್ರಧಾನಿ ಮೋದಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ನಾಯರು ಇದ್ದಕ್ಕಿದ್ದಂತೆ ಸತ್ಯ ಮಾತನಾಡುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ದಾವಣಗೆರೆಯಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಯಡಿಯೂರಪ್ಪ ಅತ್ಯಂತ ಭ್ರಷ್ಟ ಎಂದು ಹೇಳಿದ್ದರು. 
ಯಡಿಯೂರಪ್ಪ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಇತ್ತೀಚೆಗಷ್ಟೇ ನಿವೃತ್ತರಾಗಿರುವ ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿದ್ದರು ಎಂದು ಅಮಿತ್ ಶಾ ಹೇಳಿದ್ದರು. 
SCROLL FOR NEXT