ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಲೀಕಯ್ಯ ಗುತ್ತೇದಾರ್
ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಮತ್ತು ಅಫ್ಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ನಡುವಿನ ದಶಕಗಳ ಕಾಲದ ಶೀತಲಸಮರ ಕೊನೆಗೂ ಬಯಲಿಗೆ ಬಂದಿದೆ. ಹೀಗಾಗಿ ಪಕ್ಷ ತೊರೆದು ಬಿಜೆಪಿ ಸೇರಲು ಎಲ್ಲಾ ಸಿದ್ಧತೆಗಳು ನಡೆದಿವೆ.
2009 ರಲ್ಲಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಆರಂಭವಾದ ಶೀತಲ ಸಮರ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ, ಗುತ್ತೇದಾರ್ ಬೆಂಬಲಿಗರ ಮುಂದೆ ಹಾಗೂ ಮಾಧ್ಯಮದವರ ಮುಂದೆ ಮಾಲೀಕಯ್ಯ ಗುತ್ತೇದಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಲಬುರಗಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಅಪ್ಝಲಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ ಅಂತರ ತೀರಾ ಕಡಿಮೆಯಾಗಿದೆ ಎಂಬ ಹೇಳಿಕೆ ಇಬ್ಬರ ನಡುವಿನ ವೈರತ್ವಕ್ಕೆ ನಾಂದಿ ಹಾಡಿತ್ತು.
ಇನ್ನೂ 2014ರಲ್ಲಿ ನಡೆಲ ಲೋಕಸಭೆ ಚುನಾವಣೇ ವೇಳೆ ಇದೇ ಪರಿಸ್ಥಿತಿ ಪುನಾರವರ್ತನೆಯಾಗಿತ್ತು. ಈಡಿಗ ಸಮುದಾಯದ ಪ್ರಬಲ ನಾಯಕನಾಗಿರುವ ಮಾಲೀಕಯ್ಯ ಗುತ್ತೇದಾರ್ 1985, 1989, 1994, 1999, 2008 ಮತ್ತು 2013 ರಲ್ಲಿ ಅಪ್ಝಲಪುರ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದಾರೆ, ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಮ್ಮೆ ಮಾತ್ರ ಬಿಜೆಪಿಯ ಎಂ.ವೈ ಪಾಟೀಲ್ ವಿರುದ್ಧ ಸೋಲನುಭವಿಸಿದ್ದರು.
2013 ರ ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಗೆ ವಿರೋಧ ವ್ಯಕ್ತ ಪಡಿಸಿದ್ದ ಮಲ್ಲಿಕಾರ್ಜು ಖರ್ಗೆ ತಮಗೆ ಸಚಿವ ಆಗುವ ಅವಕಾಶವನ್ನು ತಪ್ಪಿಸಿದ್ದಾರೆ ಎಂಬುದು ಮಾಲೀಕಯ್ಯ ಗುತ್ತೇದಾರ್ ಆರೋಪವಾಗಿದೆ ಜೆ.ಎಚ್ ಪಟೇಲ್ ಸಂಪುಟದಲ್ಲಿ ಸಚಿವನಾಗಿದ್ದ ನಾನು ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಸಚಿವನಾಗುವ ಎಲ್ಲಾ ಅರ್ಹತೆಯಿತ್ತು, ಆದರೆ ಪ್ರಿಯಾಂಕ್ ಖರ್ಗೆಗೆ ಸಂಪುಟದಲ್ಲಿ ಸ್ಥಾನ ನೀಡಲಾಯಿತು, ನಾನು ಹಲವು ಬಾರಿ ಶಾಸಕನಾಗಿದ್ದೇನೆ, ಆದರೆ ನನ್ನನ್ನು ನಿರ್ಲಕ್ಷ್ಸಿಸಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂಬುದು ಗುತ್ತೇದಾರ್ ಅವರ ಆರೋಪವಾಗಿದೆ.