ಲಕ್ಷ್ಮಿ ಹೆಬ್ಬಾಳ್ಕರ್ 
ರಾಜಕೀಯ

ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಚಿತ್ರವಿರುವ ಕುಕ್ಕರ್ ತುಂಬಿದ್ದ ಲಾರಿ ಜಪ್ತಿ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತದಾರರ ಹಂಚಲು....

ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತದಾರರ ಹಂಚಲು ಸಾಗಿಸುತ್ತಿದ್ದ ಕುಕ್ಕರ್ ಲಾರಿಯನ್ನು ಶನಿವಾರ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 
ಲಕ್ಷ್ಮಿ ಹೆಬ್ಬಾಳ್ಕರ್​​ ಭಾವಚಿತ್ರ ಇರುವ ಕುಕ್ಕರ್​​​ ತುಂಬಿದ ಲಾರಿಯೊಂದನ್ನು ಇಂದು ಬೆಳಗಾವಿಯ ಸದಾಶಿವ ನಗರದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕುಕ್ಕರ್ ಹಂಚುತ್ತಿರುವ ಬಗ್ಗೆ ಬಿಜೆಪಿಯ ಅನಿಲ್ ಬೆನಕೆ ಅವರು ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಇಬ್ಬರು ಪೊಲೀಸ್ ಇನ್ಸ್​​​​​ಪೆಕ್ಟರ್‌ಗಳು ವಾಹನವನ್ನು ರಸ್ತೆಯಲ್ಲಿ ತಡೆದರು.  ಬಳಿಕ ಚುನಾವಣಾ ಅಧಿಕಾರಿಗಳು ಆಗಮಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಾಗೂ ಅನಿಲ್ ಬೆನಕೆ ನಡುವೆ ವಾಗ್ವಾದ ನಡೆಯಿತು. 
ಸಿಬ್ಬಂದಿ ತಪಾಸಣೆ ನಡೆಸಿದಾಗ ಕುಕ್ಕರ್‌ಗಳು ಕಂಡು ಬಂದಿದ್ದು, ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ.
ನೀತಿ ಸಂಹಿತೆ ಜಾರಿಯಾದ ನಂತರವೂ ಲಕ್ಷ್ಮಿ ಹೆಬ್ಬಾಳ್ಕರ್​​ ಅವರು ಕುಕ್ಕರ್ ಹಂಚುತ್ತಿರುವ ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬಿಜೆಪಿ, ಜೆಡಿಎಸ್ ಮತ್ತು ಎಂಇಎಸ್ ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಕುಕ್ಕರ್ ತುಂಬಿದ್ದ ಲಾರಿಯನ್ನೇ ಜಪ್ತಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT