ರಾಮನಗರದಲ್ಲಿ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ಉದ್ಯಮದ ಮುಖಂಡರೊಂದಿಗೆ ಸಂವಾದ ನಡೆಸಿದ ಅಮಿತ್ ಶಾ 
ರಾಜಕೀಯ

ಮಂಡ್ಯದಲ್ಲಿ ವಿಶ್ವದಲ್ಲಿಯೇ ಅತ್ಯುನ್ನತ ರೇಷ್ಮೆ ಹಬ್ ಸ್ಥಾಪನೆ - ಅಮಿತ್ ಶಾ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಂಡ್ಯದಲ್ಲಿ ವಿಶ್ವದಲ್ಲಿಯೇ ಅತ್ಯುನ್ನತವಾದ ರೇಷ್ಮೆ ಹಬ್ ಸ್ಥಾಪನೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಂಡ್ಯದಲ್ಲಿ ವಿಶ್ವದಲ್ಲಿಯೇ ಅತ್ಯುನ್ನತವಾದ ರೇಷ್ಮೆ ಹಬ್ ಸ್ಥಾಪನೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ರಾಮನಗರದಲ್ಲಿ ನಿನ್ನೆ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ಉದ್ಯಮದ ಮುಖಂಡರೊಂದಿಗೆ  ಸಂವಾದ ನಡೆಸಿದ ಅಮಿತ್ ಶಾ, ರೇಷ್ಮೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರಸರ್ಕಾರ ಬದ್ಧವಾಗಿದ್ದು, ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಮಹದಾಯಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅಮಿತ್ ಶಾ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಹಾಗೂ ಅಹಂಕಾರದ ಸಂಕೇತ. ಅಂತಹ ಸಂಸ್ಕೃತಿಯನ್ನು ನಾವು ಭಾರತದಿಂದ ತೊಲಗಿಸುತ್ತೆವೆ. ಇದು ನಮ್ಮ ಕಾಂಗ್ರೆಸ್ ಮುಕ್ತ ಭಾರತದ ವ್ಯಾಖ್ಯಾನ ಎಂದರು.

ನಾನು ಹೋದಲೆಲ್ಲಾ ಜನರುಬದಲಾವಣೆ ಬೇಕಿದೆ ಎಂದು ಹೇಳುತ್ತಾರೆ. ಜನರು ಈಗಾಗಲೇ ಕಾಂಗ್ರೆಸ್ಸನ್ನು ಕಿತ್ತೆಸೆಯುವ ನಿರ್ಧಾರ ಮಾಡಿಕೊಂಡಿದ್ದಾರೆ. ಹೀಗಿದ್ದಾಗ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ  ಎಂದು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಣ್ವಸ್ತ್ರ ಒತ್ತಡಕ್ಕೆ ಮಣಿಯದ ಅಮೆರಿಕಾ: ಶಾಂತಿ ಪ್ರಸ್ತಾವನೆಗೆ ನಕಾರ; ಷರತ್ತುಗಳು ಅತಿಯಾಯ್ತು-ಸಮಯ ವ್ಯರ್ಥ ಮಾಡುತ್ತಿದ್ದಾರೆ; ಇರಾನ್ ವಿರುದ್ಧ ಟ್ರಂಪ್ ತೀವ್ರ ಕಿಡಿ

ಕದನ ವಿರಾಮ ನಡುವಲ್ಲೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: 10 ಮಂದಿ ಸಾವು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಅಮೆರಿಕ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಮಧ್ಯವರ್ತಿಗಳಿಗೆ ಹೊಸ ಪ್ರಸ್ತಾವನೆ ಕಳುಹಿಸಿದ ಇರಾನ್!

ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕೌತುಕ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ-ಬಿ.ಕೆ ಹರಿಪ್ರಸಾದ್ ಮಾತುಕತೆ! Video

IPL 2026: ರಾಹುಲ್ ಭರ್ಜರಿ ಬ್ಯಾಟಿಂಗ್; ರಾಜಸ್ಥಾನ ವಿರುದ್ಧ ಡೆಲ್ಲಿ 7 ವಿಕೆಟ್ ಗೆಲುವು!

SCROLL FOR NEXT