ಸ್ಯಾಮ್ ಪಿತ್ರೋಡಾ 
ರಾಜಕೀಯ

ವೈವಿಧ್ಯತೆ ಬೆದರಿಕೆಯಲ್ಲಿದ್ದು, ಪ್ರಜೆಗಳು ಎಂತಹ ದೇಶ ನಿರ್ಮಿಸಬೇಕೆಂದು ನಿರ್ಧರಿಸಬೇಕು: ಪಿತ್ರೋಡಾ

ಭಾರತದ ವೈವಿಧ್ಯತೆ ಇಂದು ಬೆದರಿಕೆಯಲ್ಲಿದ್ದು, ಎಂತಹ ದೇಶವನ್ನು ನಿರ್ಮಿಸಬೇಕೆಂಬುದನ್ನು ರಾಷ್ಟ್ರದ ಪ್ರಜೆಗಳೇ ನಿರ್ಧರಿಸಬೇಕೆಂದು ಕಾಂಗ್ರೆಸ್ ಪಕ್ಷಗ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸೋಮವಾರ ಹೇಳಿದ್ದಾರೆ...

ಬೆಂಗಳೂರು; ಭಾರತದ ವೈವಿಧ್ಯತೆ ಇಂದು ಬೆದರಿಕೆಯಲ್ಲಿದ್ದು, ಎಂತಹ ದೇಶವನ್ನು ನಿರ್ಮಿಸಬೇಕೆಂಬುದನ್ನು ರಾಷ್ಟ್ರದ ಪ್ರಜೆಗಳೇ ನಿರ್ಧರಿಸಬೇಕೆಂದು ಕಾಂಗ್ರೆಸ್ ಪಕ್ಷಗ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸೋಮವಾರ ಹೇಳಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ರಾಷ್ಟ್ರ ರಾಜಕೀಯಕ್ಕೆ ಅತ್ಯಂತ ಪ್ರಮುಖ ಚುನಾವಣೆಯಾಗಿದೆ. 2019ರ ಲೋಕಸಭಾ ಚುನಾವಣೆಗೆ ರಾಜ್ಯದ ಚುನಾವಣೆ ಮುನ್ನುಡಿಯಾಗಲಿದೆ ಎಂದು ರಾಜ್ಯದ ಚುನಾವಣೆಯ ಪ್ರಾಮುಖ್ಯತೆ ಕುರಿತು ಹೇಳಿದ್ದಾರೆ. 
ಕಾಂಗ್ರೆಸ್'ನ್ನು ಪರಿಣಾಮಕಾರಿ ಚುನಾವಣಾ ಹೋರಾಟ ಸಂಘಟನೆಯಾಗಿ ಹೇಗೆ ಮಾಡಬಹುದು? 
ಕಾಂಗ್ರೆಸ್ ಪಕ್ಷ ಆಂದೋಲನದ ಆಧಾರದ ಮೇಲಿದ್ದು, ರಚಿತ ಆಧಾರದ ಮೇಲಿಲ್ಲ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ರಚನೆಯ ಆಧಾರದ ಮೇಲಿದೆ. ನಮ್ಮಲ್ಲಿ ವೃತ್ತಿಪರ ಸಮೂಹವಿಲ್ಲ. ಆಧುನಿಕ ಭಾರತಕ್ಕಾಗಿ ಹೊಸ ಪಕ್ಷವನ್ನು ರಚಿಸಬೇಕಿದ್ದರೆ, ಮೊದಲು ನಾವು ಸಂಘಟನಾತ್ಮಕ ವಾಸ್ತುಶಿಲ್ಪ ಅಭಿವೃದ್ಧಿ ಪಡಿಸಬೇಕು. ಈ ಹಿಂದೆ ಈ ರೀತಿಯ ಅಗತ್ಯಗಳಿರಲಿಲ್ಲ. ಆದರೆ, ಆರ್'ಎಸ್ಎಸ್ ಕಳೆದ 70 ವರ್ಷಗಳಿಂದ ಅದನ್ನು ಬೆಳೆಸಿಕೊಂಡು ಬಂದಿದೆ. ಹೀಗಾಗಿ ಕಾಂಗ್ರೆಸ್ ಕೂಡ ರಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ. 
ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರ ಜೊತೆಗೂ ಕೆಲ ಮಾಡಿದ ಅನುಭವವಿದ್ದು, ಇದರಲ್ಲಿ ಯಾವ ರೀತಿಯ ಬದಲಾವಣೆಗಳನ್ನು ನೋಡಿದ್ದೀರಿ?
ಹಿಂದಿನದ್ದಿಕ್ಕಿಂತ ಜಟಿಲವಾಗಿದೆ. ಜನರಿಗೆ ಬಳಕೆ ಮಾಡಲು ಸಾಕಷ್ಟು ಸಲಕರಣೆಗಳಿವೆ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳಿವೆ. ನಾವು ಪರಿಣಾಮ ಬೀರಬಹುದು ಎಂದು ಜನರು ತಿಳಿಯುತ್ತಾರೆ. ಪ್ರತೀಯೊಬ್ಬರೂ ನಾವು ಶಕ್ತಿಶಾಲಿಯುತ ವ್ಯಕ್ತಿಯೆಂದೇ ತಿಳಿಯುತ್ತಾರೆ. ಆದರೆ, ಆ ಸಬಲೀಕರಣವೇ ಇಂದು ತಪ್ಪು ಹಾದಿಗೆ ಹೋಗುತ್ತಿರುವುದು ಕಂಡು ಬರುತ್ತಿವೆ. ಸಾಮಾಜಿಕ ಜಾಲತಾಣಗಳು ತಪ್ಪು ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿವೆ ಕೋತಿ ಕೈಯಲ್ಲಿ ಗೊಂಬೆ ಕೊಟ್ಟರೆ ಏನಾಗುತ್ತದೆಯೋ, ಅಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ. 
2019ರಲ್ಲಿ ಮೋದಿಯವರನ್ನು ಕಾಂಗ್ರೆಸ್ ನಿಲ್ಲಿಸಲಿದೆ ಎಂದೆನಿಸುತ್ತದೆಯೇ? 
ಇದಕ್ಕೆ ನನ್ನ ಬಳಿ ಉತ್ತರವಿಲ್ಲ. ಜನರೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಕಾಂಗ್ರೆಸ್ ಹಿಂದೆ ನಿಂತು ಪ್ರಾಮಾಣಿಕವಾಗಿ ಕೆಲಸ ಮಾಡಿದ ವ್ಯಕ್ತಿಯನ್ನು ನಂಬುತ್ತೀರೋ ಅಥವಾ 5 ವರ್ಷಗಳಿಂದ ಸುಳ್ಳುಗಳನ್ನು ಹೇಳಿಕೊಂಡೇ ಯಾವ ಆಭಿವೃದ್ಧಿ ಕೆಲಸವನ್ನು ಮಾಡದ ವ್ಯಕ್ತಿಯನ್ನು ನಂಬುತ್ತೀರೋ? ಎಂದು ಪ್ರಶ್ನಿಸಿದ್ದಾರೆ. 
ರಾಹುಲ್ ಗಾಂಧಿಗೆ ಸಲಹೆಗಳನ್ನು ನೀಡುತ್ತೀರಾ?
ರಾಹುಲ್ ಗಾಂಧಿಗೆ ನಾನು ಯಾವುದೇ ರೀತಿಯ ಸಲಹೆಗಳನ್ನು ನೀಡುವುದಿಲ್ಲ. ವೈಯಕ್ತಿಕವಾಗಿ ರಾಹುಲ್ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ನಾನು ರಾಹುಲ್ ತಂದೆಯ ಗೆಳೆಯ. ಚಿಕ್ಕ ಮಗುವಿದ್ದಾಗಿನಿಂದಲೂ ರಾಹುಲ್ ನನ್ನು ನೋಡಿದ್ದೇನೆ. ಹೀಗಾಗಿ ನಾನು ಏನೇ ಹೇಳಿದರೂ, ಅದನ್ನು ರಾಹುಲ್ ಸಾಮಾಧಾನದಿಂದ ಕುಳಿತು ಕೇಳುತ್ತಾನೆ. ವಿದೇಶಗಳಿಗೆ ತೆರಳಿದಾಗ ಇಬ್ಬರೂ ಸಾಕಷ್ಟು ಸಮಯ ಕಳೆಯುತ್ತೇವೆ. ರಾಹುಲ್ ಒಳ್ಳೆಯ ಹುಡುಗ. ರಾಹುಲ್ ಪಪ್ಪು ಅಲ್ಲ. ಚೆನ್ನಾಗಿ ಓದಿದ, ವಿನಮ್ರ ಹಾಗೂ ಸರಳ ವ್ಯಕ್ತಿತ್ವ ಆತನದ್ದು. 
ಐಟಿ ಕ್ಷೇತ್ರಕ್ಕೆ 300 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ, ಇದು ಸತ್ಯವೇ? 
ಇಂದು ನಾವು ನೋಡುತ್ತಿರುವ ಹಾಗೂ ಅರ್ಥಮಾಡಿಕೊಳ್ಳುತ್ತಿರುವ ಐಟಿ ಕ್ಷೇತ್ರ, ಮುಂದಿನ 10 ವರ್ಷಗಳಲ್ಲಿ ಬದಲಾಗಲಿದೆ. ವಿದೇಶಗಳಿಂದ ಸಾಫ್ಟ್ ವೇರ್ ಗಳು ಬರಲಿವೆ. ಬ್ಯಾಂಕ್ ಗಳಲ್ಲಿ ಹಣವಿಲ್ಲದೇ ಹೋಗಬಹುದು. ಆದರೆ, ಮುಂದಿನ ದಿನಗಳಲ್ಲಿ ಐಟಿ ಕ್ಷೇತ್ರ ವಿಭಿನ್ನ ರೀತಿಯಲ್ಲಿ ಕಾಣಿಸಲಿದೆ. 300 ಬಿಲಿಯನ್ ಕೊಡುಗೆ ಕಷ್ಟವಾಗಬಹುದು. ಆದರೆ, ಅದು ನಮ್ಮ ಆಕಾಂಕ್ಷೆಯಾಗಿದೆ ಎಂದಿದ್ದಾರೆ.
ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳ ಕೈಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿದ್ದೀರಿ, ಉತ್ತಮ ಆಲೋಚನೆಯೇ? 
ಆಲೋಚನೆ ಉತ್ತಮವಾಗಿದೆ. ಅದನ್ನು ಹೇಗೆ ಅನುಷ್ಠಾನಗೊಳಿಸುತ್ತೀರಿ ಎಂಬುದು ಇಲ್ಲಿರುವ ಪ್ರಶ್ನೆ. ಶೈಕ್ಷಣಿಕ ಆ್ಯಪ್ ಗಳ ಜೊತೆದೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಗಳನ್ನು ನೀಡಿದರೆ ಅದು ಉತ್ತಮವಾದ ಆಲೋಚನೆ. ಆ್ಯಪ್ ಗಳಿಲ್ಲದೆಯೇ ಸ್ಮಾರ್ಟ್ ಫೋನ್ ಗಳ ವಿತರಣೆ ನಿಜಕ್ಕೂ ದುರಂತ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!