ನರೇಂದ್ರ ಮೋದಿ ಜಾಕೆಟ್ ಬಗ್ಗೆ ರಮ್ಯಾ ಟ್ವೀಟ್: ಮತ್ತೊಮ್ಮೆ ಪ್ರಧಾನಿ ಕಾಲೆಳೆದ ಮಾಜಿ ಸಂಸದೆ
ಮತ್ತೊಮ್ಮೆ ಪ್ರಧಾನಿ ಕಾಲೆಳೆದು ಟ್ವೀಟ್ ಮಾಡಿರುವ ರಮ್ಯಾ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ....
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸದಾ ಪ್ರಧಾನಿ ಮೋದಿ ಅವರ ವಿರುದ್ಧ ಟ್ಟೀಟ್ ಮಾಡುತ್ತಿರುತ್ತಾರೆ.
ಮತ್ತೊಮ್ಮೆ ಪ್ರಧಾನಿ ಕಾಲೆಳೆದು ಟ್ವೀಟ್ ಮಾಡಿರುವ ರಮ್ಯಾ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನರೇಂದ್ರ ಮೋದಿ ಜೀ...ಸೋ ಫ್ಯಾನ್ಸಿ, ಐ ಲವ್ ದಿ ಲೋರೋ ಪಿಯಾನಾ ಜಾಕೆಟ್ ಆನ್ ಯು, ಅದರ ಬೆಲೆ 17 ಸಾವಿರ ಯುರೋ....ತುಂಬಾ ಅಗ್ಗದ ಬೆಲೆಯದ್ದು,ಅದನ್ನು ಕೊಂಡುಕೊಳ್ಳಲು ಯಾರ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದೀರೀ ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.