ಅಶೋಕ ಮತ್ತು ಎಂ. ಶ್ರೀನಿವಾಸ್
ಬೆಂಗಳೂರು: ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕಂಟ್ರೋಲ್ ನಲ್ಲಿದೆ, ಚುನಾವಣೆ ಬಂದಾಗಲೆಲ್ಲಾ ಈ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಮೇಲುಗೈ, 2008 ಮತ್ತು 2013 ರಲ್ಲಿ ಬಿಜೆಪಿಯಿಂದ ಆರ್ ಅಶೋಕ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರು ಅಂದುಕೊಂಡಷ್ಟು ಸುಲಭವಾಗಿಲ್ಲ ಜಯದ ಹಾದಿ, ಬಿಜೆಪಿಯ ಮಾಜಿ ಮುಖಂಡ ಎಂ. ಶ್ರೀನಿವಾಸ್ ಅಶೋಕ್ ವಿರುದ್ಧ ಪದ್ಮನಾಭನಗರದಿಂದ ಕಣಕ್ಕಿಳಿದಿದ್ದಾರೆ.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಶ್ರೀನಿವಾಸ್ ಗೆ ಪದ್ಮನಾಭನಗರದಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಚಿರಪರಿಚಿತರಾಗಿರುವುದರಿಂದ ಮತ ವಿಭಜನೆಯಾಗುವುದರಲ್ಲಿ ಅಚ್ಚರಿಯಿಲ್ಲ, ಇದು ಗುರು-ಶಿಷ್ಯರ ನಡುವಿನ ಹೋರಾಟ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.
ಎಂ. ಶ್ರೀನಿವಾಸ್ ಆರ್, ಅಶೋಕ್ ಗೆ ರಾಜಕೀಯ ಗುರುವಾಗಿದ್ದರು, ತಮ್ಮ ಕ್ಷೇತ್ರದಲ್ಲಿ ಅಶೋಕ್ ಹಲವು ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ, ಈ ಬಾರಿ ಮತದಾರರು ಜಾತಿ ಮತ್ತು ಪಕ್ಷದ ಆದಾರದಲ್ಲಿ ವಿಭಜನೆಯಾಗಲಿದ್ದಾರೆ, ಕೆಲ ಬಿಜೆಪಿ ಕಾರ್ಯಕರ್ತರು ಶ್ರೀನಿವಾಸ್ ಪರ ಪ್ರಚಾರ ಕೈಗೊಳ್ಳುವುದರಿಂದ ಅಶೋಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
2008 ರ ಕ್ಷೇತ್ರ ವಿಭಜನೆ ನಂತರ ಪದ್ಮನಾಭನಗರ ಕ್ಷೇತ್ರ ರಚನೆಯಾಯಿತು. ಇಲ್ಲಿನ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ನಿಂದಾಗಿ ಯಾರು ಇಲ್ಲಿ ಪ್ರಭಾವಿ ಒಕ್ಕಲಿಗ ನಾಯಕನಿರಲಿಲ್ಲ,ಜೆಡಿಎಸ್ ಕೂಡ ಕ್ಷೇತ್ರವನ್ನು ನಿರ್ಲಕ್ಷಿಸಿತ್ತು, ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್ ಇಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.40 ಸಾವಿರ ಒಕ್ಕಲಿಗ ಮತದಾರಿರರುವ ಈ ಕ್ಷೇತ್ರದಲ್ಲಿ ಜೆಡಿಎಸ್ ವಿ.ಕೆ ಗೋಪಾಲ್ ಅವರಿಗೆ ಟಿಕೆಟ್ ನೀಡಿದೆ, ಕಳೆದ ಎರಡು ವರ್ಷಗಳಿಂದ ಗೋಪಾಲ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.