ನರೇಂದ್ರಮೋದಿ 
ರಾಜಕೀಯ

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವುದು ಬಿಜೆಪಿ ಉದ್ದೇಶ: ಪ್ರಧಾನಿ ಮೋದಿ

ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಮ್ಮ ಧ್ಯೇಯವಾಗಿದ್ದು,ರಾಷ್ಟ್ರಕವಿ ಕುವೆಂಪು ಅವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಉದ್ದೇಶದೊಂದಿಗೆ ನಡಿಯುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಶಿವಮೊಗ್ಗ : ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಮ್ಮ ಧ್ಯೇಯವಾಗಿದ್ದು,ರಾಷ್ಟ್ರಕವಿ ಕುವೆಂಪು ಅವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಉದ್ದೇಶದೊಂದಿಗೆ  ನಡಿಯುತ್ತಿದ್ದೇವೆ  ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಬಿಜೆಪಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರಮೋದಿ  , ಬಿಜೆಪಿ ಸಮಾಜದ ಪ್ರತಿ ವರ್ಗಕ್ಕೂ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತಿದೆ. ಆದರೆ,  ಕಾಂಗ್ರೆಸ್  ಬ್ರಿಟೀಷರ ಹಾಗೆ ಒಡೆದು ಆಳುವ ನೀತಿಗೆ ಬದ್ದವಾಗಿದೆ ಎಂದು ಆರೋಪಿಸಿದರು.

ಧರ್ಮದ ಆಧಾರದ ಮೇಲೆ ಅಪರಾಧವನ್ನು ತೀರ್ಮಾನಿಸುವ ಮಟ್ಟಕ್ಕೆ ಹೋಗಿರುವ ಕಾಂಗ್ರೆಸ್ ನ ವಿಭಜನಾಕಾರಿ ತಂತ್ರ ಸರಿಯೇ? ಅಪರಾಧಗಳಲ್ಲೂ ಧರ್ಮ, ಜಾತಿ, ಸಂಪ್ರದಾಯಗಳನ್ನು ಹುಡುಕುವ ಕೀಳುಮಟ್ಟಕ್ಕೆ ಇಳಿದಿರುವ ಇಲ್ಲಿನ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲೇಬೇಕಿದೆ ಎಂದರು.

ಕಾಂಗ್ರೆಸ್ ಸಿ ಆಕ್ಷರದಿಂದ ಆರಂಭವಾಗುತ್ತದೆ. Corruption ಸಹ ಸಿ ಅಕ್ಷರದಿಂದ  ಆರಂಭವಾಗುತ್ತದೆ. ಇವರೆಡರ ನಡುವೆ ಸಾಮತ್ಯೆ ಇದ್ದು, ಮಂತ್ರಿಗಳೆಲ್ಲಾ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕೋಟಿ ಕೋಟಿ ಲಪಾಟಾಯಿಸಿದ್ದಾರೆ ಎಂದು ಆರೋಪಿಸಿದರು.

.ಸಚಿವರೊಬ್ಬರ ಆಸ್ತಿ ಮೊತ್ತ 5 ವರ್ಷಗಳಲ್ಲಿ 800 ಕೋಟಿ ಆಗಿದೆ. ಅವರ  ಮನೆ, ಕೋಣೆ, ಬಾತ್ ರೊನಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಇದು ಹೇಗೆ ಬಂತು ಎಂದು ಪ್ರಶ್ನಿಸಿದ ಅವರು, ಹಣದ ಮೇಲೆ ಕುಳಿತು ಸಿಎಂ ಆಗುವ ಕನಸು ಕಾಣುತ್ತಿದ್ದರು, ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ಟಿಕೆಟ್ ಬಗ್ಗೆ ಮಾತನಾಡುತ್ತಾರೆ ಎಂದರು.

ಕರ್ನಾಟಕದಲ್ಲಿ ಅಭಿವೃದ್ದಿಗೆ ಎಲ್ಲಾ ರೀತಿಯ ಅವಕಾಶವಿದೆ.  ಈ ಅವಕಾಶ ಬಳಕಿಸಿಕೊಂಡು  ಎಲ್ಲಾ ಕ್ಷೇತ್ರಗಳ ಅಭಿವೃದ್ದಿಪಡಿಸಬೇಕಾಗಿದೆ. ಮೇ 15 ರ ನಂತರ ಯಡಿಯೂರಪ್ಪ ನೇತೃತ್ವದಲ್ಲಿ  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸುತ್ತಿರುವ ಮದರಸಾ ಶಿಕ್ಷಕ: ಸಿಸಿಟಿವಿ ವಿಡಿಯೋ ವೈರಲ್!

ಬೆಂಗಳೂರಿನಿಂದ ತುಮಕೂರಿಗೆ Namma Metro ಯೋಜನೆ ವಿಸ್ತರಣೆಗೆ BJP ಸಂಸದ ತೇಜಸ್ವಿ ಸೂರ್ಯ ಆಕ್ಷೇಪ!

ಬೆಂಗಳೂರಿನಿಂದ ತುಮಕೂರಿಗೆ Namma Metro: ಡಿಪಿಆರ್‌ ಟೆಂಡರ್‌ ಆಹ್ವಾನಿಸಿದ BMRCL; 20 ಸಾವಿರ ಕೋಟಿ ರೂ ವೆಚ್ಚ; ಎಲ್ಲೆಲ್ಲಿ ನಿಲ್ದಾಣ?

SCROLL FOR NEXT