ರಾಜಕೀಯ

ಪ್ರಧಾನಿ ಮೋದಿಯವರ ಮಾತುಗಳು ಚೀನಾದ ವಸ್ತುಗಳಂತೆ; ಅದಕ್ಕೆ ಗ್ಯಾರಂಟಿಯಿಲ್ಲ: ರಾಮಲಿಂಗಾ ರೆಡ್ಡಿ ಆರೋಪ

Sumana Upadhyaya

ಬೆಂಗಳೂರು: ನಗರವನ್ನು ಕ್ರೈಮ್ ಸಿಟಿ ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಚೀನಾದ ವಸ್ತುಗಳಂತೆ ಮೋದಿಯವರ ಮಾತಿಗೆ ಯಾವುದೇ ಗ್ಯಾರಂಟಿಯಾಗಲಿ, ವ್ಯಾರಂಟಿಯಾಗಲಿ ಇಲ್ಲ ಎಂದರು.

ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಪ್ರದೇಶದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂದು ಅಪರಾಧ ಪ್ರಮಾಣ ಜಾಸ್ತಿಯಾಗಿದೆ. ಆದರೆ ಬಿಜೆಪಿ ನಾಯಕರು ಕರ್ನಾಟಕದ ಕಾನೂನು, ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಿದೆ. ಮೋದಿಯವರು ಮೊಹಮ್ಮದ್ ನಲಪಾಡ್ ವಿಷಯದ ಬಗ್ಗೆ ಮಾತನಾಡುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಜೊತೆ ಸಹಯೋಗ ಹೊಂದಿದವರ ಮೇಲೆ ಅತ್ಯಾಚಾರ ಆರೋಪಗಳು ಕೇಳಿಬಂದಿವೆ. ಒಂದು ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯನ್ನು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆ ಮಾಡಲಾಯಿತು ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಬೆಂಗಳೂರು ಅಭಿವೃದ್ಧಿಗೆ ಮೋದಿಯವರ ಕೊಡುಗೆಯೇನು ಎಂದು ಅವರು ಪ್ರಶ್ನಿಸಿದರು. ಬೆಂಗಳೂರು ನಗರದ ಅಭಿವೃದ್ಧಿಗೆ ಬಿಜೆಪಿಯ ಕಾಣಿಕೆಯೇನಿದೆ? ಮೆಟ್ರೊ ರೈಲು ಯೋಜನೆಗಳಂತಹ ಎಲ್ಲಾ ಅಭಿವೃದ್ಧಿಪರ ಯೋಜನೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಆಗಿದೆ. ನಗರದ ಅಭಿವೃದ್ಧಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ದೂಷಿಸಿದರು.

SCROLL FOR NEXT