ಬೈರತಿ ಬಸವರಾಜು ಮತ್ತು ನಂದೀಶ್ ರೆಡ್ಡಿ 
ರಾಜಕೀಯ

ಕೋಟ್ಯಾಧಿಪತಿಗಳಿದ್ದರೂ ಮೂಲ ಸೌಕರ್ಯಕ್ಕೆ ಕೊರತೆ: ಕೆ.ಆರ್ ಪುರಂ ನಲ್ಲಿ 'ಬಿಗ್ ಹ್ಯಾಂಡ್' ಗಳ 'ಬಿಗ್ ಫೈಟ್'

ಮುಳುಗಿದ ಮನೆಗಳು, ರಾಜ ಕಾಲುವೆಗಳ ಕಳಪೆ ನಿರ್ವಹಣೆ ಮತ್ತು ವಿದ್ಯುತ್ ಅಭಾವ ಇಲ್ಲಿನ ಪ್ರಮುಖ ಸಮಸ್ಯೆಗಳು. ಜೊತೆಗೆ ಇಲ್ಲಿನ ರಿಯಲ್ ಎಸ್ಟೇಟ್ ಬ್ಲೂಮ್ ನಿಂದಾಗಿ ....

ಬೆಂಗಳೂರು: ಬೆಂಗಳೂರು ನಗರದ ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಸಿದ್ಧವಾದದ್ದು ಕೆ,ಆರ್ ಪುರಂ. ಐಟಿ ಕಂಪನಿಗಳಿಂದ ಪ್ರಸಿದ್ಧವಾಗಿರುವ ಕೆ.ಆರ್ ಪುರಂ ಮಳೆಗಾಲದಲ್ಲಿ ಮತ್ತಷ್ಟು ಫೇಮಸ್ ಆಗುತ್ತದೆ..
ಮುಳುಗಿದ ಮನೆಗಳು, ರಾಜ ಕಾಲುವೆಗಳ ಕಳಪೆ ನಿರ್ವಹಣೆ ಮತ್ತು ವಿದ್ಯುತ್ ಅಭಾವ ಇಲ್ಲಿನ ಪ್ರಮುಖ ಸಮಸ್ಯೆಗಳು. ಜೊತೆಗೆ ಇಲ್ಲಿನ ರಿಯಲ್ ಎಸ್ಟೇಟ್ ಬ್ಲೂಮ್ ನಿಂದಾಗಿ ಆಸ್ತಿಗಳ ಬೆಲೆ ಕೋಟಿ ಕೋಟಿ ಯಾಗಿ ಗಗನಕ್ಕೇರಿದೆ, ಹೀಗಿದ್ದರೂ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಗೆ ಪರದಾಟ ತಪ್ಪಿಲ್ಲ.
ರಿಯಲ್ ಎಸ್ಟೇಟ್ ಉದ್ಯಮ ಯೋಜನೆಗಳಿಂದಾಗಿ ಕೆ.ಆರ್ ಪುರಂ ನಲ್ಲಿ ವಲಸಿಗರ ಸಂಖ್ಯೆ ಅಪಾರ  ಪ್ರಮಾಣದಲ್ಲಿದೆ, ಅಂತರ್ಜಲ ಮಟ್ಟ ಹೆಚ್ಚಿನ ಪ್ರಮಾಣದಲ್ಲಿದ್ದರೂ ಕುಡಿಯುವ ನೀರಿನ ಕೊರತೆ ಮಾತ್ರ ಕಡಿಮೆಯಾಗಿಲ್ಲ,
ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಬರುಪತ್ತದೆ. ಹೀಗಾಗಿ ಕ್ರಿಮಿನಲ್ ಪ್ರಕರಣಗಳು ಹೆಚ್ಚುತ್ತಿವೆ, ಸಿಎಂ ಬಲಗೈ ಬಂಟನೆಂದೆ ಖ್ಯಾತಿ ಪಡೆದಿರುವ ಬೈರತಿ ಬಸವರಾಜ್ ಅವರ ಬಳಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಯಿದೆ,  ಹೀಗಾಗಿ ಅವರ ಬೆಂಬಲಿಗರು ಎರಡನೇ ಬಾರಿ ಶಾಸಕರಾಗುವುದನ್ನು ಬಯಸುತ್ತಿದ್ದಾರೆ. 
2008 ರಲ್ಲಿ ಬಿಜೆಪಿಯ ನಂದೀಶ್ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂದೀಶ್ ರೆಡ್ಡಿ ಬಳಿ ಕೂಡ ಕೋಟಿ ಕೋಟಿ ಲೆಕ್ಕದಲ್ಲಿ ಹಣವಿದ್ದು ಇಬ್ಬರು ಪ್ರಬಲ ಪ್ರತಿಸ್ಪರ್ದಿಗಳಾಗಿದ್ದಾರೆ. 
ಹೊರಮಾವು, ರಾಮಮೂರ್ತಿ ನಗರ, ವಿಜ್ಞಾನ ಪುರ, ಕೆ.ಆರ್ ಪುರಂ, ಬಸವನಪುರ, ದೇವಸಂದ್ರ, ಎ. ನಾರಾಯಣಪುರ ಮತ್ತು ವಿಜ್ಞಾನ ನಗರ ಮತ್ತು ಎಚ್ ಎ ಎಲ್ ಏರ್ ಪೋರ್ಟ್ ವಾರ್ಡ್ ಗಳಿವೆ. ಮಾಜಿ ಸಿಎಂ ಡಿ.ವಿ ಸದಾನಂದಗೌಡ ಇಲ್ಲಿನ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ, 2013ರ ಚುನಾವಣೆಯಲ್ಲಿ  ನಂದೀಶ್ ರೆಡ್ಡಿ 24 ಸಾವಿರ ಮತಗಳ ಅಂತರದಿಂದ ಸೋತಿದ್ದರು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT