ಬಿ.ಶ್ರೀರಾಮುಲು 
ರಾಜಕೀಯ

ಶ್ರೀರಾಮುಲು ಎಂಟ್ರಿ; ಮೊಳಕಾಲ್ಮೂರು ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಪ್ರಚಾರ

ಕಳೆದೊಂದು ತಿಂಗಳಿನಿಂದ ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ದೇಶದ ಗಮನ ...

ಚಿತ್ರದುರ್ಗ: ಕಳೆದೊಂದು ತಿಂಗಳಿನಿಂದ ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ ಬಿಜೆಪಿಯಿಂದ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಮತ್ತು ವಿವಾದಿತ ಗಣಿಧನಿ ಗಾಲಿ ಜನಾರ್ದನ ರೆಡ್ಡಿ ಆಗಮನ.

ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು 1957ರಲ್ಲಿ ಚುನಾವಣೆಯನ್ನು ಗೆದ್ದ ಸಮಯದಲ್ಲಿ ಈ ಕ್ಷೇತ್ರ ಹೆಚ್ಚಿನ ಪ್ರಗತಿ ಕಂಡುಬಂದಿರಲಿಲ್ಲ. ಇಂದು ಜನರಿಗೆ ಮೂಲಭೂತ ಸೌಕರ್ಯ ಸಿಗಬಹುದೆಂಬ ನಿರೀಕ್ಷೆಯಿದೆ. ಶ್ರೀರಾಮುಲು ಇಲ್ಲಿ ತನ್ನ ಆಶ್ರಯದಲ್ಲಿಯೇ ಬೆಳೆದ ಎಸ್.ತಿಪ್ಪೇಸ್ವಾಮಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಬಿ.ಶ್ರೀರಾಮುಲು, ಕಾಂಗ್ರೆಸ್ ನಿಂದ ಬಿ.ಯೋಗೇಶ್ ಬಾಬು ಮತ್ತು ಸ್ವತಂತ್ರ ಅಭ್ಯರ್ಥಿ ಈಗಿನ ಶಾಸಕ ಎಸ್.ತಿಪ್ಪೇಸ್ವಾಮಿ ಮಧ್ಯೆ. ಇಲ್ಲಿನ ನಾಯಕ ಸಮುದಾಯ ಊರು ನಾಯಕ, ಮ್ಯಾಸ ನಾಯಕಗಳಾಗಿ ಇಬ್ಭಾಗವಾಗಿದೆ. ಅದು ಶ್ರೀರಾಮುಲು ಅವರು ಬಾದಾಮಿ ಕ್ಷೇತ್ರದಲ್ಲಿ ಕೂಡ ನಾಮಪತ್ರ ಸಲ್ಲಿಸದ ಮೇಲೆ. ಆದರೆ ಇಲ್ಲಿ ಪ್ರಚಾರ ನಡೆಸುತ್ತಿರುವ ಗಾಲಿ ಜನಾರ್ದನ ರೆಡ್ಡಿಯವರು ಎರಡೂ ಬಣಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಬಾದಾಮಿಯ ಕುರುಬ ಸಮುದಾಯದವರು ಶ್ರೀರಾಮುಲು ವಿರುದ್ಧ ಮತಚಲಾಯಿಸಲು ಮುಂದಾಗಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಒಲವು ತೋರಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ತಮಗೆ ಹೆಮ್ಮೆ ಎನ್ನುತ್ತಿದ್ದಾರೆ.

ತಿಪ್ಪೇಸ್ವಾಮಿ ಶ್ರೀರಾಮುಲು ಅವರ ಹಿಂದಿನ ಬಿಎಸ್ ಆರ್ ಕಾಂಗ್ರೆಸ್ ನಿಂದ ತಿರಸ್ಕೃತಗೊಂಡಿರುವುದರಿಂದ ಜನರಿಗೆ ಅವರ ಮೇಲೆ ಮತ್ತು ಅವರ ಕೆಲಸದ ಮೇಲೆ ನಂಬಿಕೆ, ಅನುಕಂಪವಿದೆ. ಶ್ರೀರಾಮುಲು ಅವರು ಗೆದ್ದರೆ ಅವರನ್ನು ಹುಡುಕಿಕೊಂಡು ನಾವು ಬಳ್ಳಾರಿಗೆ ಅಥವಾ ಬೆಂಗಳೂರಿಗೆ ಹೋಗಬೇಕೆ? ಸ್ಥಳೀಯ ಅಭ್ಯರ್ಥಿಯನ್ನು ಆರಿಸುವುದು ನಮಗೆ ಒಳ್ಳೆಯದು ಎನ್ನುತ್ತಾರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕರಿಯಣ್ಣ.

ಮತ್ತೊಬ್ಬ ರಾಜಕೀಯ ನಾಯಕ ಎನ್ ವೈ ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಕರೆತಂದಿರುವುದು ಬಿಜೆಪಿಯ ಕಾರ್ಯಕರ್ತರಿಗೆ ಸಿಟ್ಟು ತರಿಸಿದೆ. ಅವರಿಗೆ ಕೂಡ್ಲಿಗಿಯಲ್ಲಿ ಟಿಕೆಟ್ ನೀಡಲಾಗಿದೆ. ಹೆಚ್.ಟಿ.ನಾಗಿರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಗೋಪಾಲಕೃಷ್ಣ ಅವರ ವಿರುದ್ಧವಾಗಿದ್ದು ಇದು ಪಕ್ಷದ ಕಾರ್ಯಕರ್ತರನ್ನು ಸ್ಥೈರ್ಯಗೆಡಿಸಲಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಯೋಗೇಶ್ ಬಾಬು ಅವರ ಪರ ಹಲವು ಮತದಾರರು ಒಲವು ತೋರಿದ್ದಾರೆ.

ಇನ್ನು ಈ ಕ್ಷೇತ್ರದ ದಲಿತ, ಕುರುಬ ಮತ್ತು ಮುಸಲ್ಮಾನರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕಷ್ಟೆ. ಇಲ್ಲಿನ ವಿದ್ಯಾವಂತ ಯುವಜನಾಂಗ ಶ್ರೀರಾಮುಲು ಅಭಿವೃದ್ಧಿಪರ ಕೆಲಸಗಳನ್ನು ಮಾಡಬಹುದು ಎಂದು ಭಾವಿಸಿದರೆ ತುಂಗಾ ಮೇಲ್ದಂಡೆಯಿಂದ ಮತ್ತು ತುಂಗಭದ್ರಾ ಹಿನ್ನೀರಿನಿಂದ ನೀರು ತರಿಸಬಹುದೆಂಬ ಆಶಾವಾದದಲ್ಲಿ ರೈತರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT