ಕರ್ನಾಟಕದಲ್ಲಿ ಶುದ್ಧ ರಾಜಕೀಯ V/s ಕೆಟ್ಟ ರಾಜಕೀಯ: ರಾಹುಲ್ ಗಾಂಧಿ
ಕರ್ನಾಟಕ ವಿಧಾನಸಭೆ ಚುನಾವಣೆ ಶುದ್ಧ ರಾಜಕೀಯ V/s ಕೆಟ್ಟ ರಾಜಕೀಯ ಹೋರಾಟ ನಡೆಯುತ್ತಿದೆ ಎಂದು ಕಾಂಗ್ರೆಸ್...
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಶುದ್ಧ ರಾಜಕೀಯ V/s ಕೆಟ್ಟ ರಾಜಕೀಯ ಹೋರಾಟ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ ಭ್ರಷ್ಟ ರೆಡ್ಡಿ ಗ್ಯಾಂಗ್ ಅನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಶುದ್ಧ ರಾಜಕೀಯ V/s ಕೆಟ್ಟ ರಾಜಕೀಯ ಮತ್ತು ಗಣಿ ಮಾಫಿಯಾ V/s ಜನತೆ ಮಧ್ಯ ಹೋರಾಟಕ್ಕೆ ನಾಂದಿ ಹಾಡಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಭ್ರಷ್ಟ ರೆಡ್ಡಿ ಗ್ಯಾಂಗ್ ಅನ್ನು ಅಧಿಕಾರದಿಂದ ದೂರವಿಡಲು ಸಹಕರಿಸಬೇಕು ಎಂದು ಕರ್ನಾಟಕ ಮತದಾರರಿಗೆ ರಾಹುಲ್ ಕರೆ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು, ಮೇ 15ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.