ರಾಜಕೀಯ

ವೈದ್ಯರ ಮೇಲೆ ಸಚಿವ ಹೆಗಡೆ ಮಾಡಿದ್ದ ದಾಳಿ ಪ್ರಧಾನಿ ಮೋದಿ ಮರೆತಿದ್ದಾರೆ: ಕುಲಕರ್ಣಿ

Manjula VN
ಧಾರವಾಡ; ವೈದ್ಯರೊಬ್ಬ ಮೇಲೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ನಡೆಸಿದ್ದ ಹಲ್ಲೆ ಪ್ರಕರಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮರೆತಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಸಚಿವ ವಿನಯ ಕುಲಕರ್ಣಿಯವರು ಸೋಮವಾರ ಹೇಳಿದ್ದಾರೆ. 
ಉಪ್ಪಿನ ಬೇಟಗೇರಿಯಲ್ಲಿ ಸೋಮವಾರ ಧಾರವಾಡ ಗ್ರಾಮೀಣ 71ರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರ ಮತಯಾಚಿಸಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು. 
ಇದೇ ವೇಳೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ನೀಡುತ್ತಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದ ಪ್ರಧಾನಮಂತ್ರಿಗಳಾಗಿ ಮೋದಿಯವರು ಸತ್ತ ಪ್ರಕರಣಗಳ ಕುರಿತು ಮಾತನಾಡುತ್ತಿರುವುದನ್ನು ನೋಡಿದರೆ, ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 
2013ರಲ್ಲಿ ಸಚಿವ ಕುಲಕರ್ಣಿಯವರು ಶಾಸಕರಾಗಿದ್ದಾಗ ಕಿಮ್ಸ್ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. 6 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದರು. ಹೀಗಾಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಕುಲಕರ್ಣಿಯವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಖಂಡಿಸಿ ವೈದ್ಯ ಸಮೂಹ ಪ್ರತಿಭಟನೆ ನಡೆಸಿತ್ತು. ಬಳಿಕ ಕುಲಕರ್ಣಿಯವರು ವೈದ್ಯರ ಬಳಿ ಕ್ಷಣೆಯಾಚಿಸಿದ್ದರು. 
ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಮೋದಿಯವರು ಈ ಪ್ರಕರಣದ ಕುರಿತಂತೆ ಮಾತನಾಡಿದ್ದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕುಲಕರ್ಣಿಯವರು ಅನಂತ್ ಕುಮಾರ್ ಹೆಗಡೆಯವರ ಪ್ರಕರಣವನ್ನು ಹಿಡಿದ ಪ್ರಧಾನಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ. 
SCROLL FOR NEXT