ರಾಜಕೀಯ

ಪುಲಕೇಶಿ ನಗರ: ಜೆಡಿಎಸ್ ವಿರುದ್ಧ 'ಅಖಂಡ' ಶಕ್ತಿ ಪ್ರದರ್ಶನಕ್ಕೆ 'ಕೈ' ಸಜ್ಜು

Sumana Upadhyaya

 ಬೆಂಗಳೂರು: ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ನಿಂದ ಪ್ರಸನ್ನ ಕುಮಾರ್ ಸ್ಪರ್ಧಿಸಿ ಅಂದು ಜೆಡಿಎಸ್ ನಲ್ಲಿದ್ದ  ಅಖಂಡ ಶ್ರೀನಿವಾಸ ಮೂರ್ತಿ ಗೆದ್ದಿದ್ದರು.

ಈ ಬಾರಿ ಪ್ರಸನ್ನ ಕುಮಾರ್ ಜೆಡಿಎಸ್ ನಿಂದ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಪರಿಚಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 1,78,292 ಅರ್ಹ ಮತದಾರರಿದ್ದರು. ಅವರ ಪೈಕಿ 1,00, 505 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ವರ್ಷ ಅರ್ಹ ಮತದಾರರ ಸಂಖ್ಯೆ ಏರಿಕೆಯಾಗಿದೆ. 2,31,913 ಮತದಾರರಿದ್ದು ಅಖಂಡ ಶ್ರೀನಿವಾಸ ಮೂರ್ತಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಹಲವು ನಾಗರಿಕ ಸಮಸ್ಯೆಗಳಿಂದ ನಲುಗಿ ಹೋಗಿರುವ ಪುಲಕೇಶಿ ನಗರ ಕ್ಷೇತ್ರ ಬಿಜೆಪಿ ಪರ ಯಾವುದೇ ಒಲವು ತೋರಿಲ್ಲ. ಪ್ರಸನ್ನ ಕುಮಾರ್ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ನಡುವೆ ಹೋರಾಟವಿದೆ. ಈ ಕ್ಷೇತ್ರದಲ್ಲಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ. ಕಾಂಗ್ರೆಸ್ ನ ಪ್ರಕಾರ, ಸುಮಾರು 21,000 ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ.

SCROLL FOR NEXT