ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ 
ರಾಜಕೀಯ

ಮೋದಿ ಸರ್ಕಾರದ ವಿರುದ್ಧ ಅಕ್ರೋಶದ ಅಲೆ, ನಿರುದ್ಯೋಗವೇ ದೊಡ್ಡ ವಿಷಯ: ಚಿದಂಬರಂ

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶಗಳ ಅಲೆ ಹೆಚ್ಚಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ನಿರುದ್ಯೋಗ ವಿಚಾರವೇ ದೊಡ್ಡ ವಿಷಯವಾಗಲಿದೆ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಹೇಳಿದ್ದಾರೆ...

ಬೆಂಗಳೂರು; ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶಗಳ ಅಲೆ ಹೆಚ್ಚಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ನಿರುದ್ಯೋಗ ವಿಚಾರವೇ ದೊಡ್ಡ ವಿಷಯವಾಗಲಿದೆ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಹೇಳಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾದಿ ಹೊರಹೊಮ್ಮಲಿದೆ ಎಂದ ಅವರು, ಮೋದಿಯವರ ಪ್ರಚಾರ ಶೈಲಿಯ ಕುರಿತು ಪ್ರತಿಕ್ರಿಯೆ ನೀಡಿ ಪ್ರಧಾನಮಂತ್ರಿಗಳ ಸ್ಥಾನಕ್ಕೆ ಯೋಗ್ಯವಲ್ಲದ್ದು ಎಂದು ಹೇಳಿದ್ದಾರೆ. 
ರಾಷ್ಟ್ರೀಯ ದೃಷ್ಟಿಕೋನದಲ್ಲಿ ಕರ್ನಾಟಕ ಚುನಾವಣೆ ಎಷ್ಟು ಮುಖ್ಯವಾದದ್ದು? 
ಕರ್ನಾಟಕದ ಚುನಾವಣೆ ಅತ್ಯಂತ ಮುಖ್ಯವಾದದ್ದು. ಏಕೆಂದರೆ, ವಿಂಧ್ಯಾಯ ದಕ್ಷಿಣಕ್ಕೆ ಏಕೈಕ ರಾಜ್ಯವಾಗಿದ್ದು, ಬಿಜೆಪಿಯು ಕಾಂಗ್ರೆಸ್'ಗೆ ಸವಾಲೆಸೆಯುತ್ತಿದೆ. 2014ರಂತೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಈ ಬಾರಿಯ ಚುನಾವಣೆ ಮುಖ್ಯವಾಗಿದೆ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ಗಢ ರಾಜ್ಯಗಳು ಹಿಂದಿ ಮಾತನಾಡುವ ರಾಜ್ಯಗಳಾಗಿದ್ದು, ಈ ಮೂರು ರಾಜ್ಯಗಳ ಚುನಾವಣೆಗೆ 5 ತಿಂಗಳು ಬಾಕಿಯಿರುವಾಗಲೇ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ ಮೂಲಕ ಈ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಭವಿಷ್ಯ ನಿರ್ಧಾರಗೊಳ್ಳಲಿದೆ ಎಂದು ಹೇಳಿದ್ದಾರೆ. 
ರಾಜ್ಯದ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ? 
ಜನರಿಂದ ನಾನು ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, ಕಾಂಗ್ರೆಸ್ ಏಕೈಕ ಅತೀದೊಡ್ಡ ಪಕ್ಷವಾಗಲಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೆಲ ಸ್ವತಂತ್ರ ಚುನಾವಣೆಗಳು ಹೇಳುವ ಪ್ರಕಾರ ನಾವು ಈಗಾಗಲೇ ಗೆಲುವಿಗೆ ಅರ್ಧದ ಮಾರ್ಗದಲ್ಲಿದ್ದೇವೆಂದು ಹೇಳುತ್ತಿದೆ. ಆದರೆ, ಗೆಲ್ಲುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ಪೂರ್ಣ ಭರವಸೆಯೊಂದಿಗೆ ಹೇಳುತ್ತಿದ್ದಾರೆಂದಿದ್ದಾರೆ. 
ಮೋದಿ ಆರ್ಥಿಕ ನೀತಿಗಳಿಂದ ಆಕ್ರೋಶಗಳು ಹೆಚ್ಚಾಗಿವೆ ಎಂದೆನಿಸುತ್ತದೆಯೇ? 
ಆರ್ಥಿಕ ಪರಿಸ್ಥಿತಿ ಬಗ್ಗೆ ದೇಶದಾದ್ಯಂತ ಅಸಮಾಧಾನಗಳು ವ್ಯಕ್ತವಾಗುತ್ತಿರುವುದು ಸ್ಪಷ್ಟವಾಗಿದೆ. ಪದವಿ ಪಡೆದ ಬಳಿಕ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುತ್ತಿಲ್ಲ. 10ರಲ್ಲಿ 7 ಮಂದಿ ತಮಗೆ ಉದ್ಯೋಗ ದೊರೆಯುವ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದ್ದಾರೆ. 
2019ರ ಚುನಾವಣೆಯಲ್ಲಿ ನಿರುದ್ಯೋಗವೇ ದೊಡ್ಡ ವಿಚಾರವಾಗಲಿದೆ ಎಂದು ಹೇಳಿದ್ದೀರಿ ಹಾಗಾದರೆ, ಸರ್ಕಾರ ಎಡವಿದ್ದು ಎಲ್ಲಿ? 
ಸರ್ಕಾರ ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಎಸ್ಎಂಇ ಕ್ಷೇತ್ರವು ದೇಶದ ಎಲ್ಲಾ ಉದ್ಯೋಗಗಳಲ್ಲಿ ಶೇ.90 ರಷ್ಟು ಪಾಲನ್ನು ಹೊಂದಿದೆ. ಆದರೆ, ಎಸ್ಎಂಇ ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ ಮತ್ತು ಎಸ್ಎಂಇ ರಹಿತ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯ?...ಮತ್ತೊಂದು ಸಮಸ್ಯೆಯೆಂದರೆ, ಈಗಾಗಲೇ ಖಾಲಿಯಿರು ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಬೋಧನಾ ವಿಭಾಗದಲ್ಲೂ ಖಾಲಿಯಿರುವ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಹೈಕೋರ್ಟ್ ನಲ್ಲಿ ನ್ಯಾಯಾಧೀಶರನ್ನು ನೇಮಕ ಮಾಡುತ್ತಿಲ್ಲ. ಇದಲ್ಲದೆ, ಹಲವು ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳು ಭರ್ತಿಯಾಗುತ್ತಿಲ್ಲ ಎಂದು ಹೇಳಿದ್ದಾರೆ. 
ಇದೇ ಒಂದು ಅಂಶವಾದರೆ, ಚುನಾವಣೆಯಲ್ಲಿ ಬಿಜೆಪಿ ಹೇಗೆ ಗೆಲವು ಸಾಧಿಸಲಿದೆ? 
ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿರುವು ಸ್ವಯಂ ಪಾಲನೆಯ ಪುರಾಣವಾಗಿದೆ. ಬಿಜೆಪಿ ಎಲ್ಲೆಲ್ಲಿ ಗೆಲವು ಸಾಧಿಸಿದ್ದಾರೆ? ಉತ್ತರಪ್ರದೇಶದಲ್ಲಿ ಗೆದ್ದಿದ್ದಾರೆ. ರಾಜ್ಯದಲ್ಲಿ ವಿರೋಧಿ ಆಡಳಿತ ಅಲೆಎದ್ದಿದೆ. ಪಂಜಾಬ್, ಮಣಿಪುರ, ಮೇಘಾಲಯ ಸೋಲುಕಂಡರು. ಗುಜಾರಾತ್ ನಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲು ಯೋಜನೆ ರೂಪಿಸಿದ್ದರು. ಆದರೆ, 99ರಲ್ಲಿ ತೃಪ್ತಿ ಪಡಬೇಕಾಯಿತು. ಇದು ಅವರ ನೈತಿಕ ಸೋಲೆಂದೇ ಹೇಳಬಹುದು. ಕಳೆದ ಚುನಾವಣೆಯಲ್ಲಿ ತಮಿಳುನಾಡು ಸೇರಿದಂತೆ ದೇಶದಲ್ಲಿರುವ ಬಹುತೇಕ ಜನತೆ ಉದ್ಯೋಗ ಸೃಷ್ಟಿಸುವ ಮೋದಿಯವರ ಭರವಸೆಯನ್ನು ನಂಬಿ ಬಿಜೆಪಿಗೆ ಮತ ಹಾಕಿದ್ದರು. ಆದರೆ, ಇಂದು ಯುವಕರಿಗೆ ಉದ್ಯೋಗ ದೊರಕಿಲ್ಲ ಎಂದು ತಿಳಿಸಿದ್ದಾರೆ. 
ಹಾಗಾದರೆ, ಸಿದ್ದರಾಮಯ್ಯ ಸರ್ಕಾರದ ವಿರುದ್ಧವಾಗಿ ಇದು ಕೆಲಸ ಮಾಡುವುದಿಲ್ಲವೇ? 
ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಅಂಶ ಕೆಲಸ ಮಾಡಲಿದೆ. ನಿರುದ್ಯೋಗ ಸಮಸ್ಯೆ ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ದೇಶದಾದ್ಯಂತ ನಿರುದ್ಯೋಗದ ಪ್ರಮಾಣ ಶೇ.5.9ರಷ್ಟಿದ್ದರೆ, ಗುಜರಾತ್ ರಾಜ್ಯದಲ್ಲಿ ಶೇ.5 ರಷ್ಟಿದೆ. ಆದರೆ ಕರ್ನಾಟಕದಲ್ಲಿ ಶೇ.2.6ರಷ್ಟಿದೆ. ಕರ್ನಾಟದಲ್ಲಿ ಸಾಕಷ್ಟು ಉದ್ಯೋಗಗಾವಕಾಶಗಳಿವೆ ಎಂದು ಹೇಳಿದ್ದಾರೆ. 
ಗುಜರಾತ್ ರಾಜ್ಯದಲ್ಲಿ ನಡೆಸಿದ ರೀತಿಯಲ್ಲಿಯೆ ಕರ್ನಾಟಕದಲ್ಲೂ ಮೋದಿಯವರು ಪ್ರಚಾರ ಮಾಡುತ್ತಿದ್ದಾರೆ, ಇದರಿಂದ ಬಿಜೆಪಿಗೆ ಲಾಭವಾಗಲಿದೆಯೇ? 
ಬಿಜೆಪಿಗೆ ದೊರಕಿರುವ ಪ್ರಮುಖ ಅಸ್ತ್ರವೆಂದರೆ ಇದೇ. ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಮಂತ್ರಿಗಳಿಗೆ ಸಮಸ್ಯೆಯಿಲ್ಲ ಎಂದು ಸುಪ್ರೀಂಕೋರ್ಟ್'ಗೆ ತಿಳಿಸಲಾಗಿದೆ. ಆದರೆ, ಕರ್ನಾಟಕದಲ್ಲಿ 21 ರ್ಯಾಲಿಗಳನ್ನು ಮೋದಿಯವರು ನಡೆಸುತ್ತಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿಗಳು ತೀವ್ರವಾಗಿ ಪ್ರಚಾರ ನಡೆಸಬೇಕಿಲ್ಲ. ಮೋದಿ ಪ್ರಧಾನಮಂತ್ರಿಯಾಗಿ ಪ್ರಚಾರ ನಡೆಸಬಾರದು, ಮೋದಿ, ಮೋದಿಯಾಗಿಯೇ ಪ್ರಚಾರ ನಡೆಸಬೇಕು. 
ಯಡಿಯೂರಪ್ಪ ವಿರುದ್ಧ ಸೋನಿಯಾ ಹಾಗೂ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸುತ್ತಿರುವುದಕ್ಕೆ ಪ್ರಧಾನಿ ಮೋದಿ ಕಿಡಿಕಾರಿ, ಸೋನಿಯಾ, ರಾಹುಲ್ ಕೂಡ ಜಾಮೀನನ ಮೇಲೆ ಹೊರ ಬಂದಿದ್ದಾರೆಂದಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ? 
ವಿಚಾರದಿಂದ ತಪ್ಪಿಸಿಕೊಳ್ಳಲು ಮೋದಿ ಯತ್ನಿಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಕೂಡ ಅವರಿಗೆ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸಾಮಾನ್ಯ ವ್ಯಕ್ತಿ ಅರ್ಧ ಗಂಟೆ ಕುಳಿತು ಓದಿದರೂ ಕೂಡ ಇದೊಂದು ವ್ಯರ್ಥ ಪ್ರಕರಣವೆಂಬುದು ತಿಳಿಯುತ್ತದೆ. ಆದರೆ, ಮೋದಿಯವರು ಜಾಮೀನಿನಿಂದ ಹೊರಬಂದಿರುವುದನ್ನು ಕ್ರಿಮಿನಲ್ ಪ್ರಕರಣವೆಂದು ಜನರ ಮುಂದೆ ಹೇಳುತ್ತಿದ್ದಾರೆ. 
ಸಿದ್ದರಾಮಯ್ಯ ಅವರನ್ನು ಹಿಂದು ವಿರೋಧಿ ಎಂಬ ಪಟ್ಟಕಟ್ಟಲು ಬಿಜೆಪಿ ಯತ್ನಿಸಿದೆ, ಹತ್ಯೆಗಳ ಸರಣಿ ಕುರಿತು ಬಿಜೆಪಿ ಮಾತು ಕೆಲಸ ಮಾಡಲಿದೆ ಎಂದೆನಿಸುತ್ತದೆಯೇ? 
ಅವೆಲ್ಲವೂ ಒಂದು ದಿನದ ಘೋಷಣೆಗಳಷ್ಟೇ. ಅಂತಹ ಜನರನ್ನು ಜನರು ಕೇವಲ ಒಂದು ದಿನ ಮಾತ್ರ ನೆನಪಿಸಿಕೊಳ್ಳುತ್ತಾರೆ. ಪ್ರಧಾನಮಂತ್ರಿಗಳು ಈ ರೀತಿಯ ಪ್ರಚಾರಗಳಿಗೆ ಕೈ ಹಾಕಬಾರದು ಎಂದು ತಿಳಿಸಿದ್ದಾರೆ. 
ಹಲವಾರು ಕೊಡುಗೆಗಳನ್ನು ನೀಡುತ್ತೇವೆಂಬ ಭರವಸೆಗಳ ಮೂಲಕ ಕಾಂಗ್ರೆಸ್ ಮತಗಳನ್ನು ಕೇಳುತ್ತಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಕೆಲ ಭರವಸೆಗಳು ಸಮರ್ಥನೀಯವಾಗಿವೆ. ಅಮೆರಿಕಾದಲ್ಲಿ ಆಹಾರ ಕೂಪನ್'ಗಳು ಹಾಗೂ ಶಿಕ್ಷಣದ ವೌಚರ್ ಗಳನ್ನು ನೀಡಲಾಗುತ್ತದೆ. ಅಕ್ಕಿ, ಗೋಧಿ ಬಳಕೆಯ ವಸ್ತುಗಳನ್ನು ಬಿಟ್ಟು ಇದರೆ, ಬಳಕೆ ಬಾರದ ಸೇವೆ, ವಸ್ತುಗಳನ್ನು ನೀಡುವುದ ಕೆಲಸಕ್ಕೆ ಬರುವುದಿಲ್ಲ. ಇಲ್ಲೆದರ ಬದಲು ಜನರಿಗೆ ಉತ್ತಮ ರಸ್ತೆ, ಆಸ್ಪತ್ರೆಗಳು, ಶಾಲೆಯಗಳು, ಕುಡಿಯುವ ನೀರನ್ನು ನೀಡಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. 
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ಅಂಶಗಳೇನು? 
5 ವರ್ಷಗಳ ಸ್ಥಿರ ಸರ್ಕಾರ ಮತ್ತು ಮುಖ್ಯಮಂತ್ರಿ. 5 ವರ್ಷಗಳ ಕಾಲ ಕಾಂಗ್ರೆಸ್ ಸ್ಥಿರ ಸರ್ಕಾರವನ್ನು ನಡೆಸಿದೆ. ಕರ್ನಾಟಕದಲ್ಲಿ ಜಿಎಸ್'ಡಿಪಿ (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ಶೇ.8 ರಷ್ಟು ಹೆಚ್ಚಳಗೊಂಡಿದೆ. ಹೀಗಾಗಿಯೇ ಮುಖ್ಯಮಂತ್ರಿಗಳ ಬಗ್ಗೆ ಯಡಿಯೂರಪ್ಪ ಅವರು ಏನನ್ನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಕೆಲ ಆಡಳಿತ ವಿರೋಧಿ ಅಲೆಯಿದೆ. ಆದರೆ, ಅದು ಸ್ಥಳೀಯ ಮಟ್ಟದಲ್ಲಿ ಮಾತ್ರ. 
ಅತಂತ್ರ ಸಂದರ್ದಲ್ಲಿ ಜಾತ್ಯಾತೀತ ಪಕ್ಷಗಳು ಒಗ್ಗೂಡಬೇಕೆಂದು ಬಯಸುವಿರಾ? 
ರಾಜ್ಯದಲ್ಲಿ ಬಹುಮತದ ಮೂಲಕ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕರ್ನಾಟಕವನ್ನು ದೃಷ್ಟಿಯಲ್ಲಿಕೊಂಡು ಮಾತ್ರವಲ್ಲ, ಸಾಮಾನ್ಯವಾಗಿ ಮೈತ್ರಿ, ಒಗ್ಗಟ್ಟು ಅನಿವಾರ್ಯವಾದರೆ, ಉತ್ತರಪ್ರದೇಶದಲ್ಲಿ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರಿಗೆ ಕಲಿಸಿದ ಪಾಠದಂತೆ ಮಾರ್ಗ ತೋರಿಸಬೇಕಾಗುತ್ತದೆ. ಜಾತ್ಯಾತೀತ ಮತ್ತು ಉದಾರ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video