ಮಂಗಳೂರು: "ಚಿದಂಬರಂ ಮಾಡಿದ್ದನ್ನೆಲ್ಲ ಬಿಜೆಪಿಗರು ಬಾಯಿ ಬಿಟ್ಟರೆ ಕಾಂಗ್ರೆಸ್ ಸರ್ವನಾಶವಾಗಲಿದೆ" ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ "ಚಿದಂಬರಂ ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಿಗೆ ಬರುತ್ತಾರೆ, ನಮ್ಮ ವರಿಗೆ ನಾಯಕರನ್ನು ಮೆಚ್ಚಿಸುವುದು ಕೆಲಸವಾಗಿದೆ.. ಚಿದಂಬರಂ ಯಾರೆಂದು ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯವರೇನಾದರೂ ಚಿದಂಬರಂ ಬಗ್ಗೆ ಬಾಯಿ ಬಿಟ್ಟರೆಕಾಂಗ್ರೆಸ್ ಸರ್ವನಾಶವಾಗಲಿದೆ" ಎಂದಿದ್ದಾರೆ.
ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹರೀಶಕುಮಾರ್ ಸುದ್ದಿಗೋಷ್ಠಿಯ ಅರ್ಧದಲ್ಲೇ ಎದ್ದು ಹೋಗಿದ್ದದ್ದು ಜನಾರ್ಧನ ಪೂಜಾರಿಯವರ ಬೇಸರಕ್ಕೆ ಕಾರಣವಾಗಿತ್ತು.
"ಚಿದಂಬರಂ ಆಗಮಿಸುತ್ತಿದ್ದಂತೆ ನಮ್ಮವರು ಸುದ್ದಿಗೋಷ್ಠಿ ಬಿಟ್ಟು ತೆರಳುತ್ತಾರೆ, ಅವರಿಗೆ ನಾಯಕರನ್ನು ಮೆಚಿಸುವುದು ಕೆಲಸವಾಗಿದೆ, ನಾನೇನೂ ಕೆಲಸವಿಲ್ಲದೆ ಇಲ್ಲಿ ಕುಳಿತಿದ್ದೆನಾ?" ಎಂದು ಕಿಡಿಕಾರಿದ್ದಾರೆ.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜನಾರ್ಧನ ಪೂಜಾರಿ "ಯಾರೇ ಆದರೂ ಸರಿ, ಸಿದ್ದರಾಮಯ್ಯ, ಮೋದಿ ಯಾರೇ ಆದರೂ ದುರಹಂಕಾರಿ ಮನೋಬಾವ ಬದಲಿಸದೆ ಹೋದಲ್ಲಿ ಸೋಲು ಖಚಿತ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರೆಂದು ಹೇಳಿಕೊಂಡವರು ಸೋಲು ಅನುಭವಿಸುತ್ತಾರೆ." ಎಂದರು.
"ಈ ಹಿಂದೆ ನಾನೇ ಸಿದ್ದರಾಮಯ್ಯ ಅವರಿಗೆ ಸಲಹೆ ನಿಡಿದ್ದೆ. ಅವರು ಜನಪರ ಕೆಲಸ ಮಾಡಿದ್ದಾರೆ. ಆದರೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ತಮ್ಮ ವರ್ತನೆ ಬದಲಿಸಿಕೊಳ್ಳದೆ ಹೋದಲ್ಲಿ ರಾಜಕೀಯವಾಗಿ ಮುಂದುವರಿಯುವುದು ಅಸಾಧ್ಯ." ಪೂಜಾರಿ ಹೇಳಿದ್ದಾರೆ.
ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ, ಪ್ರಧಾನಿ ಮೋದಿ, ಅಮಿತ್ ಶಾ ಯಾರೇ ಬರಲಿ ಕ್ಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸದಿಂದ ನುಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos