ಅಮಿತ್ ಶಾ 
ರಾಜಕೀಯ

ಬಾದಾಮಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ: ಅಮಿತ್ ಶಾ ನೇತೃತ್ವದಲ್ಲಿ ರೋಡ್ ಶೋ

ಕರ್ನಾಟಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರದ ಅಂತಿಮ ದಿನ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಬಾದಾಮಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ.

ಬಾದಾಮಿ: ಕರ್ನಾಟಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರದ ಅಂತಿಮ ದಿನ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಬಾದಾಮಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ.
ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ, ಬಾದಾಮಿ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಸಹ ಭಾಗವಹಿಸಿದ್ದು ಒಟ್ಟು ಹತ್ತರಿಂದ ಹನ್ನೆರಡು ಸಾವಿರ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗೇ ಆದರೂ ಸೋಲಿಸಲು ಪಣ ತೊಟ್ಟಿರುವ ಬಿಜೆಪಿ ಜನಾರ್ಧನ ರೆಡ್ಡಿ ಸಮೀಪವವರ್ತಿಯಾದ ಶ್ರೀರಾಮುಲು ಅವರನ್ನು ಬಾದಾಮಿ ಅಭ್ಯರ್ಥಿಯನ್ನಾಗಿಸಿದೆ.
ರೋಡ್ ಶೋ ಇಂದು (ಗುರುವಾರ) ಮಧ್ಯಾಹ್ನ 12.15ಕ್ಕೆ ಪ್ರಾರಂಭವಾಗಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತ್ತು. 
ಇದಕ್ಕೂ ಹಿಂದೆ ನಾಮಪತ್ರ ಸಲ್ಲಿಸುವ ಕಡೆಯ ದಿನ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ಇಬ್ಬರೂ ನಾಯಕರು ನಗರಕ್ಕೆ ಆಗಮಿಸಿದ್ದಾಗ ನಗರ ಇದೇ ಪ್ರಕಾರದ ಜನಸಂದಣಿಗೆ ಸಾಕ್ಷಿಯಾಗಿತ್ತು.
ರ್ಯಾಲಿ ಅಂತ್ಯದಲ್ಲಿ ಮಾತನಾಡಿದ ಅಮಿತ್ ಶಾ ಬಿಜೆಪಿ ಸ್ಪಷ್ಟ ಬಹುಮತ ಹೊಂದಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಬಾದಾಮಿ ರ್ಯಾಲಿ ಮುಗಿಸಿ ಅಮಿತ್ ಶಾ ಬೆಂಗಳೂರಿಗೆ ಹಿಂತಿರುಗಿದರೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಕ್ಷೇತ್ರದಲ್ಲಿ ಎರಡನೇ ದೊಡ್ಡ ನಗರವಾದ ಗುಳೇನಗುಡ್ಡದಲ್ಲಿ ಇನ್ನೊಂದು ರೊಡ್ ಶೋ ನಡೆಸಿದ್ದಾರೆ.
ಬಿಜೆಪಿಯ ಅಂತಿಮ ಯಾತ್ರೆ
ಬಿಜೆಪಿ ಬಾದಾಮಿ ಹಾಗೂ ಗುಳೇನಗುಡ್ಡದಲ್ಲಿ ರೋಡ್ ಶೋ, ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಇದ್ದರ ಬೆನ್ನಲ್ಲೇ ಕಾಂಗ್ರೆಸ್ ಬಿಜೆಪಿ ರೋಡ್ ಶೋ ಆ ಪಕ್ಷದ ಅಂತಿಮ ಯಾತ್ರೆ ಎಂದು ಲೇವಡಿ ಮಾಡಿದೆ. ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದ ಸಿಎಂ ಇಬ್ರಾಹಿಂ ಮಾತನಾಡಿ "ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವದೆಂಬ ವಿಶ್ವಾಸ ನಮಗಿದೆ. ಇಂದಿನ ಈ ಬಿಜೆಪಿಗರ ರ್ಯಾಲಿ ಆ ಪಕ್ಷದ ಅಂತಿಮ ಯಾತ್ರೆ ಆಗಲಿದೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್