ಸಿ,ವಿ ರಾಮನ್ ನಗರ ಅಭ್ಯ.ರ್ಥಿಗಳು 
ರಾಜಕೀಯ

ಬಿಜೆಪಿ ಭದ್ರಕೋಟೆ ಸಿ.ವಿ.ರಾಮನ್ ನಗರ: ಮೂರು ಬಾರಿಯ ಶಾಸಕ ಎಸ್.ರಘು ವಿರುದ್ಧ ಮೇಯರ್ ಸ್ಪರ್ಧೆ

ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಮೀಸಲು ಕ್ಷೇತ್ರ ಸಿ.ವಿ. ರಾಮನ್ ನಗರದಲ್ಲಿ ಮೇಯರ್ ಸಂಪತ್ ರಾಜ್ ಸ್ಪರ್ಧಿಸಿರುವುದರಿಂದ ಚುನಾವಣಾ ಕಣ ...

ಬೆಂಗಳೂರು: ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ  ಮೀಸಲು ಕ್ಷೇತ್ರ ಸಿ.ವಿ. ರಾಮನ್ ನಗರದಲ್ಲಿ ಮೇಯರ್ ಸಂಪತ್ ರಾಜ್ ಸ್ಪರ್ಧಿಸಿರುವುದರಿಂದ ಚುನಾವಣಾ ಕಣ ರಂಗೇರಿದೆ.
ಹಾಗೆಯೇ ಕಾಂಗ್ರೆಸ್​ನಿಂದ ಟಿಕೆಟ್ ವಂಚಿತವಾಗಿ ಜೆಡಿಎಸ್​ನಿಂದ ಕಣದಲ್ಲಿರುವ ಪಿ. ರಮೇಶ್ ಕೂಡ ಪೈಪೋಟಿ ನೀಡಲಿದ್ದಾರೆ.
ಆಮ್ ಆದ್ನಿ ಪಕ್ಷದಿಂದ ಮೋಹನ್ ದಾಸರಿ ಕಣಕ್ಕಿಳಿದಿದ್ದು ಮತ ವಿಭಜನೆಯಾಗುವುದರಲ್ಲಿ ಅನುಮಾನವಿಲ್ಲ, 2013ರ  ವಿಧಾನಸಭೆ ಚುನಾವಣೆ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ದೇಶದ ಯಾವುದೇ ಒಂದೇ ಒಂದು ಸ್ಥಳದಲ್ಲಿ 114 ಪಬ್, ಬಾರ್ ಮತ್ತು ಬ್ರೂವರೀಸ್ ಗಳಿರುವುದು ಇದೊಂದೇ ಸ್ಥಳದಲ್ಲಿ ಅಂದರೇ ಇಂದಿರಾನಗರದ 100 ಅಡಿ ರಸ್ತೆಯಲ್ಲಿ,  ಇದರ ವಿರುದ್ಧ ವಾಗಿ ಹೈಕೋರ್ಟ್ ಆದೇಶವಿದ್ದರೂ ಯಾವುದೇ ಕಾನೂನು ಇದುವರೆಗೂ ಅನುಷ್ಠಾನಗೊಂಡಿಲ್ಲ, ಇಲ್ಲಿನ ಪಬ್ ಮತ್ತು ಬಾರ್ ಗಳಲ್ಲಿ ಬರುವ ಶಬ್ದದಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ.
ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಮೇಯರ್ ಸಂಪತ್ ರಾಜ್ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸವಿರುವ ಈ ಪ್ರದೇಶದಲ್ಲಿ ಬಿಜೆಪಿಯ ಎಸ್ ರಘು ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರೀತಿ ಏಳು ವಾರ್ಡ್​ಗಳಿರುವ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಇರುವ ಒಟ್ಟು ಮತದಾರರು 2,60,559. ಇವರಲ್ಲಿ 1,37,650 ಪುರುಷರಾದ್ರೆ, 1,22,811 ಮಹಿಳಾ ಮತದಾರರು. ಇನ್ನು ಜಾತಿವಾರು ಲೆಕ್ಕಾಚಾರ ನೋಡಿದ್ರೆ, ಪರಿಶಿಷ್ಟರೇ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಆ ಸಮುದಾಯಕ್ಕೆ ಸೇರಿದ ಮತದಾರರು ಬರೋಬ್ಬರಿ 1.55 ಲಕ್ಷದಷ್ಟಿದ್ದರೆ, ಹಿಂದುಳಿದವರು 45 ಸಾವಿರದಷ್ಟಿದ್ದಾರೆ. ಇನ್ನು ಸಾಮಾನ್ಯ ಮತದಾರರು 55 ಸಾವಿರ ಪ್ರಮಾಣದಲ್ಲಿದ್ದಾರೆ ಎನ್ನುತ್ತೆ ಚುನಾವಣಾ ಆಯೋಗ.
ಇನ್ನು ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿರುವ ಕಲಿಗಳ ಬಗ್ಗೆ ಹೇಳೋದಾದ್ರೆ, ಸಿವಿ ರಾಮನ್ ನಗರದಲ್ಲಿ ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ರಘು ಇದ್ದಾರೆ. ಮೋದಿ ಅಲೆ, ಸರ್ಕಾರದ ಜನವಿರೋಧಿ ಅಲೆ ಜೊತೆ ತಾವು ಮಾಡಿರುವ ಅಭಿವೃದ್ಧಿ ಕೈ ಹಿಡಿಯಬಹುದೆನ್ನುವ ವಿಶ್ವಾಸ ಅವರದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT