ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ, ಎಸ್ ಸಿ ಎಸ್ ಟಿ, ಕುರುಬ, ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಜನರು ಮತ ನೀಡಿದರೇ ಕಾಂಗ್ರೆಸ್ ಪಕ್ಷದ ಟಾರ್ಗೆಟ್ 113 ತಲುಪಲು ಸಹಾಯವಾಗುತ್ತದೆ ಎಂದು ನಂಬಿದೆ.
ರಾಜ್ಯದ ಒಟ್ಟು ಮತದಾರರ ಪೈಕಿ ಶೇ.50 ರಷ್ಟು ಮಂದಿ ಈ ಮತದಾರರಿದ್ದಾರೆ, ಜೊತೆಗೆ ಲಿಂಗಾಯತ ಸಮುದಾಯವು ತಮಗೆ ಬೆಂಬಲ ನೀಡಲಿದೆ ಎಂದು ಪಕ್ಷ ಭರವಸೆ ಹೊಂದಿದೆ. ಏಕೆಂದರೇ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡುವಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದರಿಂದ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದೆ.
ಶೇ. 16 ರಷ್ಟು ಇರುವ ಲಿಂಗಾಯತ ಸಮುದಾಯದ ಪೈಕಿ ಕೇವಲ ಶೇ. 3ರಿಂದ 5 ರಷ್ಟು ಮಾತ್ರ ಕಾಂಗ್ರೆಸ್ ಗೆ ಬೆಂಬಲ ನೀಡಿದೆ, ಇದು ಕಾಂಗ್ರೆಸ್ ಗೆ ಉತ್ತಮ ಬೆಳವಣಿಗೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ,
ಜಾತಿ ಲೆಕ್ಕಾಚಾರಗಳನ್ನು ಹೊರತು ಪಡಿಸಿದರೇ ಸರ್ಕಾರದ ಸಾಧನೆ ಗಳಿಂದ ತಮ್ಮ ಪಕ್ಷದ ಗೆಲುವು ಖಚಿತ ಎಂದು ನಾಯಕರ ನಂಬಿಕೆಯಾಗಿದೆ, 2013 ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಿದ್ದು, ತಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದರ ಜೊತೆಗೆ 2008ರಿಂದ 2013ರ ವರೆಗೆ ಬಿಜೆಪಿ ಸರ್ಕಾರದದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಮಾಡುತ್ತಲೇ ಬಂದಿದೆ,
ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಜೊತೆಗೆ ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿಗಳಾಗಿರುವ ರೆಡ್ಡಿ ಸಹೋದರರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿತು. ಜೊತೆಗೆ ಕಾಂಗ್ರೆಸ್ ಇದನ್ನು ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತು. ರೈತರ ಪರ ಎಂದು ಹೇಳಿಕೊಳ್ಳುವ ಮೋದಿ ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸಾಲಮನ್ನಾ ಮಾಡಲು ಸಹಕರಿಸಲಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಲೇ ಬಂದಿದೆ
ಹಿಂದಿನದನ್ನೆಲ್ಲಾ ಹೊರತು ಪಡಿಸಿದರೇ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಹಲವು ಭಾಗ್ಯ ಯೋಜನೆಗಳ ಪ್ರಯೋಜನ ಪಡೆದಿರುವ ಮತದಾರ ತಮಗೆ ಮತ ನೀಡಲಿದ್ದಾನೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ ವಾಗಿದೆ.
ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟಿನ್ ಗಳು ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯ ಭಾಗವಾಗಿವೆ,ಈ ಎಲ್ಲಾ ಅಂಶಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ, 2019ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕ ಫಲಿತಾಂಶ ಮಹತ್ತರವಾದ್ದದ್ದಾಗಿದೆ.