ಮಂಡ್ಯ: ಮಾಜಿ ವಸತಿ ಸಚಿವ ಹಾಗೂ ಚಿತ್ರ ನಟ ಅಂಬರೀಷ್ ದೊಡ್ಡರಸಿನಕೆರೆಯಲ್ಲಿ ಮತ ಚಲಾಯಿಸಿದರು.
ಈ ವೇಳೆ ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷಕ್ಕೆ ಬೆಂಬಲಿಸಬೇಕು ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ತಾವು ಇನ್ನೂ ಯಾವ ನಿರ್ಧಾರವನ್ನು ತೆಗದುಕೊಂಡಿಲ್ಲ, ನನ್ನ ಬೆಂಬಲಿಗರು ಅವರಿಗೆ ಇಷ್ಟ ಬಂದ ಪಕ್ಷವನ್ನು ಬೆಂಬಲಿಸಬಹುದು ಎಂದು ಹೇಳಿದ್ದಾರೆ.
ತಮ್ಮ ಪತ್ನಿ ಹಾಗೂ ಪುತ್ರನನ್ನು ರಾಜಕೀಯಕ್ಕೆ ಕರೆ ತರುವ ಇರಾದೆ ತಮಗಿಲ್ಲ, ಆತ ಬೇರೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ನನ್ನ ಬೆಂಬಲಿಗರು ನಾಯಕರಾಗಿ ಬೆಳೆಯಬೇಕು ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
ನನಗೆ ನಿವೃತ್ತಿ ಬೇಕಿದೆ, ಸದ್ಯ ನಾನು ಯಾವುದೇ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ, ನನ್ನ ಕಾರ್ಯಕರ್ತರನ್ನು ನಾನು ಬೆಂಬಲಿಸುತ್ತೇನೆ,ಮಂಡ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ, ಸಂಜೆ 4 ಗಂಟೆ ವೇಳೆಗೆ ಆಂಬರೀಷ್ ತಮ್ಮ ತವರೂರಾದ ದೊಡ್ಡರಸಿನಕೆರೆಗೆ ಆಗಮಿಸಿದರು. ಈ ವೇಳೆ ಅವರನ್ನು ಸ್ವಾಗತಿಸಲು ಯಾವುದೇ ಕಾಂಗ್ರಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿರಲಿಲ್ಲ, ಶಾಸಕ ಡಿ.ಸಿ ತಮ್ಮಣ್ಣ ಮತ್ತವರ ಕುಟುಂಬಸ್ಥರು ಅಂಬರೀಷ್ ಅವರಿಗೆ ಸ್ವಾಗತ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics