ಕೋಲಾರ: ಹಾಲಿ ಶಾಸಕ ಹಾಗೂ 'ನಮ್ಮ ಕಾಂಗ್ರೆಸ್ ಪಕ್ಷ'ದ ಅಭ್ಯರ್ಥಿ ವರ್ತೂರು ಪ್ರಕಾಶ್ ಗೆ ತೀವ್ರ ಮುಖಭಂಗವಾಗಿದ್ದು, ಜೆಡಿಎಸ್ ಪಕ್ಷದ ಶ್ರೀನಿವಾಸ್ ಗೌಡ ಅವರು ಜಯಭೇರಿ ಭಾರಿಸಿದ್ದಾರೆ.
ಕಳೆದ ಒಂದು ದಶಕದಿಂದಲೂ ಕೋಲಾರ ಕ್ಷೇತ್ರ ವರ್ತೂರು ಪ್ರಕಾಶ್ ಅವರ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ವರ್ತೂರು ಪ್ರಕಾಶ್ ಮತದಾರರ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಜೆಡಿಎಸ್ ನ ಶ್ರೀನಿವಾಸ್ ಗೌಡ ಅವರು ಕೋಲಾರದಲ್ಲಿ ಜಯಭೇರಿ ಭಾರಿಸಿದ್ದಾರೆ.
ಅಂತೆಯೇ ಕೋಲಾರದ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಗೆಲುವು ಸಾಧಿಸಿದ್ದಾರೆ.