ರಾಜಕೀಯ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಷ್ಟ್ರೀಯ ಮಟ್ಟದಲ್ಲಿ ಟಿಆರ್‌ಎಸ್‌ನ ತೃತೀಯ ರಂಗ ರಚನೆಗೆ ತೊಡಕಾಗುತ್ತಾ?!

Vishwanath S
ಹೈದರಾಬಾದ್: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೂ ಬಿಜೆಪಿಗೆ ಜನತೆ ಹೆಚ್ಚು ಸ್ಥಾನಗಳನ್ನು ನೀಡಿರುವುದು ನೆರೆಯ ರಾಜ್ಯ ತೆಲಂಗಾಣಕ್ಕೆ ಕೊಂಚ ಆತಂಕ ಉಂಟು ಮಾಡಿದ್ದರು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಜೆಡಿಎಸ್ ಅನ್ನು ಬೆಂಬಲಿಸಿರುವುದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸೇತ್ತರ ಹಾಗೂ ಬಿಜೆಪಿಯೇತ್ತರ ತೃತೀಯ ರಂಗ ರಚನೆಗೆ ಮುಂದಾಗಿದ್ದ ತೆಲಂಗಾಣ ಮುಖ್ಯಮಂತ್ರಿ ಟಿಆರ್ಎಸ್ ಚಂದ್ರಶೇಖರ್ ರಾವ್ ಅವರ ಯೋಜನೆಗೆ ತೊಡಕಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ವಿಫಲವಾಗಿರುವುದು ಟಿಆರ್ಎಸ್ ಪಕ್ಷಕ್ಕೆ ಖುಷಿಯ ವಿಚಾರವಾಗಿದೆ. ಒಂದು ವೇಳೆ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ಅದು ಮುಂದಿನ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ನೈತಿಕತೆಯನ್ನು ಹೆಚ್ಚಿಸಲಿತ್ತು. ಆದರೆ ಆಗಾಗಲಿಲ್ಲ ಎಂಬುದು ಮುಖ್ಯ.
ಇನ್ನು ಕಾಂಗ್ರೆಸ್ ಬೆಂಬಲ ಪಡೆದಿರುವ ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನಿರ್ಧಾರ ಕೇಂದ್ರದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಚುಕ್ಕಾಣಿಯನ್ನು ಜೆಡಿಎಸ್ ಹಿಡಿಯಲಿದೆ ಎಂಬ ಸೂಚನೆಯನ್ನು ನೀಡಿದಂತಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೂ ಮುನ್ನ ಬೆಂಗಳೂರಿಗೆ ಆಗಮಿಸಿದ್ದ ಚಂದ್ರಶೇಖರ್ ರಾವ್ ಅವರು ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಪುತ್ರ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತೃತೀಯ ರಂಗ ರಚನೆಗೆ ಬೆಂಬಲಿಸುವಂತೆ ಕೋರಿದ್ದರು. 
ಈ ವೇಳೆ ಚಂದ್ರಶೇಖರ್ ರಾವ್ ಕರ್ನಾಟಕದಲ್ಲಿರುವ ತೆಲುಗು ಭಾಷಿಕರಿಗೆ ಜೆಡಿಎಸ್ ಗೆ ಮತ ನೀಡಿ ಬಹುಮತದೊಂದಿಗೆ ಗೆಲ್ಲಿಸುವಂತೆ ಮನವಿ ಸಹ ಮಾಡಿದ್ದರು.
SCROLL FOR NEXT