ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ
ಬೆಂಗಳೂರು; ಅತಂತ್ರ ವಿಧಾನಸಭೆ ರಚನೆಯಾದ ಬೆನ್ನಲ್ಲೇ, ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಕರ್ನಾಟಕದ ಬಿಜೆಪಿ ಪರಿವೀಕ್ಷಕರಾಗಿ ಇಬ್ಬರು ಕೇಂದ್ರ ಸಚಿವರನ್ನು ನೇಮಕ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ.
ವಿಧಾನಸಭಾ ಅತಂತ್ರ ಸ್ಥಿತಿ ಹಿನ್ನಲೆಯಲ್ಲಿ ಇದೀಗ ರಾಜ್ಯಪಾಲ ವಜುಭಾಯ್ ಅವರ ನಡೆ ಕುರಿತು ತೀವ್ರ ಕುತೂಹಲಗಳು ಮೂಡತೊಡಗಿದ್ದು, ಸರ್ಕಾರ ರಚಿಸಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಂತ್ರಗಳನ್ನು ರೂಪಿಸಲು ಆರಂಭಿಸಿವೆ.
ಇದರಂತೆ ಬಿಜೆಪಿ ಇಂದು ಪಕ್ಷದ ಸಭೆಯನ್ನು ನಗರದಲ್ಲಿ ಆಯೋಜನೆ ಮಾಡಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿಕ ಬಿಜೆಪಿ ಉನ್ನತ ನಾಯಕರು ಭಾಗಿಯಾಗಲಿದ್ದು, ಚುನಾವಣಾ ಫಲಿತಾಂಶ ಕುರಿತು ಚರ್ಚೆ ನಡೆಸಲಿದ್ದಾರೆ. ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಆಗುಹೋಗುಗಳನ್ನು ಪರಿಶೀಲಿಸಲು ರಾಜ್ಯ ಬಿಜೆಪಿ ಪರಿವೀಕ್ಷಕರಾಗಿ ಎನ್'ಡಿಎ ಪಕ್ಷ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರನ್ನು ನೇಮಕ ಮಾಡಿದೆ.