ಸಾಂದರ್ಭಿಕ ಚಿತ್ರ 
ರಾಜಕೀಯ

ಬಿಜೆಪಿಯ 42, ಕಾಂಗ್ರೆಸ್ ನ 23 ಶಾಸಕರು ಕ್ರಿಮಿನಲ್ ಹಿನ್ನೆಲೆಯವರು: ಎನ್ ಜಿಒ ವರದಿ

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪನವರ ...

ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯಲ್ಲಿ ಅಪರಾಧ ಹಿನ್ನಲೆಯ 42 ಶಾಸಕರಿದ್ದು ಕಾಂಗ್ರೆಸ್ ನಲ್ಲಿ 23 ಮಂದಿಯಿದ್ದಾರೆ. ಇನ್ನು ಜೆಡಿಎಸ್ ನಲ್ಲಿ 11 ಮಂದಿ ಶಾಸಕರ ಮೇಲೆ ವಿವಿಧ ಅಪರಾಧಗಳ ಕೇಸುಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್) ಮತ್ತು ಕರ್ನಾಟಕ ಎಲೆಕ್ಷನ್ ವಾಚ್(ಕೆಇಡಬ್ಲ್ಯು) ಎಂಬ ಸರ್ಕಾರೇತರ ಸಂಘಟನೆ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳುತ್ತವೆ.

ಕರ್ನಾಟಕ ಸರ್ಕಾರದ ನೂತನ 221 ಶಾಸಕರಲ್ಲಿ 76 ಶಾಸಕರ ವಿರುದ್ಧ ವಿವಿಧ ಕೇಸುಗಳು ದಾಖಲಾಗಿವೆ. ಇವರಲ್ಲಿ 54 ಮಂದಿ ಗಂಭೀರ ಆಪಾದನೆಗಳಾದ ಕೊಲೆಯತ್ನ, ವಂಚನೆ, ನಕಲು, ಅಪಹರಣ ಇತ್ಯಾದಿಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ನಾಲ್ವರು ಶಾಸಕರು ತಮ್ಮ ವಿರುದ್ಧ ಕೊಲೆಯತ್ನ ಕೇಸು ವಿಚಾರಣೆ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತವೆ.

ಕೇಸರಿ ಪಕ್ಷ ಬಿಜೆಪಿಯಲ್ಲಿ ಅಪರಾಧ ಹಿನ್ನಲೆಯ ಶಾಸಕರು ಮುಂಚೂಣಿಯಲ್ಲಿದ್ದಾರೆ. 29 ಮಂದಿ ಬಿಜೆಪಿ ಶಾಸಕರು ಗಂಭೀರ ಆರೋಪಗಳನ್ನು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನ 12 ಮತ್ತು 8 ಮಂದಿ ಶಾಸಕರು ಕೂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಆಸ್ತಿ, ಸಂಪತ್ತು ಗಳಿಕೆಯಲ್ಲಿ 221 ಮಂದಿ ಶಾಸಕರಲ್ಲಿ 215 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ 203 ಶಾಸಕರು ಕೋಟ್ಯಧಿಪತಿಗಳಾಗಿದ್ದರು. ಪಕ್ಷದಿಂದ ನೋಡುವುದಾದರೆ ಬಿಜೆಪಿಯಲ್ಲಿ ಕೋಟ್ಯಧಿಪತಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದು ಕಾಂಗ್ರೆಸ್ ನಲ್ಲಿ 77 ಮತ್ತು ಜೆಡಿಎಸ್ ನಲ್ಲಿ 35 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!