ಬೆಂಗಳೂರು: "ಕಷ್ಟದ ಸಮಯ ಮುಂದಿದೆ ಎನ್ನುವುದು ತಿಳಿದಿದೆ. ಆದರೆ ಭಾರತೀಯ ಜನತಾ ಪಕ್ಷ ದಕ್ಷಿಣದ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಿದೆ" ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗುತ್ತಿರುವ ಈ ಹೊತ್ತಿನಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ
ಕಾಂಗ್ರೆಸ್-ಜೆಡಿಎಸ್ ನಡುವೆ ಮೂಲ ತತ್ವಗಳಲ್ಲಿ ವಿಭಿನ್ನತೆ ಇದೆ, ಹಲವರಿಗೆ ಈ ಮೈತ್ರಿ ಬಗ್ಗೆ ನೋವಿದೆ ಎನ್ನುವುದು ನನಗೆ ತಿಳಿದಿದೆ.ಆದರೆ ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ಏಕಮಾತ್ರ ಉದ್ದೇಶದೊಡನೆ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನಿಡಿದೆ ಎಂದು ಅವರು ಹೇಳಿದ್ದಾರೆ.
"ಜೆಡಿಎಸ್ ಜತೆ ಸೇರುವುದು ನಮ್ಮಲ್ಲಿ ಹಲವರಿಗೆ ನೋವನ್ನು ತಂದಿದೆ ಎನ್ನುವುದನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಆದರೆ ಬಿಜೆಪಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯುವ ಅಗತ್ಯವಿತ್ತು. ಹೀಗಾಗಿ ಹಿರಿಯ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಬೇಕಿದೆ.
"ಕಷ್ಟದ ದಿನಗಳನ್ನು ಣಾವು ಮುಂದೆ ನೋಡಲಿದ್ದೇವೆ, ನಾವು ಹಲವು ಬಾರಿ ಅಧಿಕಾರದ ವಿಚಾರದಲ್ಲಿ ವೈಮನಸ್ಯ ಅನುಭವಿಸಬೇಕಾಗುತ್ತದೆ. ಆದರೆ ಇದೆಲ್ಲವನ್ನೂ ಗಟ್ಟಿಯಾದ ನಿರ್ಧಾರದಿಂದ ಎದುರಿಸಲು ಸಿದ್ದರಾಗಬೇಕು" ಕ್ಜೆಪಿಸಿಸಿ ಮುಖ್ಯಸ್ಥರು ಹೇಳಿದ್ದಾರೆ.
ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 27ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನಾ ಕಾರಣಗಳಿಂದ ಪಕ್ಷವು ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ನಾವು ಜನರ ತೀರ್ಪನ್ನು ಗೌರವಿಸುತ್ತೇವೆ. ಆದರೆ ಬಿಜೆಪಿ ಅಧಿಕಾರಕ್ಕೇರುವುದರಿಂದ ರಾಜ್ಯದಲ್ಲಿ ಅಪಾಯಕರ ಪರಿಸ್ಥಿತಿ ನಿರ್ಮಾಣವಾಗಲಿದ್ದು ಅದನ್ನು ತಡೆಯುವ ಉದ್ದೇಶದಿಂದ ಪಕ್ಷ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪರಮೇಶ್ವರ್ ಹೇಳಿದರು.
"ಸಮ್ಮಿಶ್ರ ಸರ್ಕಾರ ರಚನೆ ಹಿಂದೆ ಯಾವ ವೈಯುಕ್ತಿಕ ಹಿತಾಸಕ್ತಿಯಾಗಲಿ, ಸ್ವಾರ್ಥದ ಉದ್ದೇಶವಾಗಲಿ ಇಲ್ಲ. ನಾವು ಇದಾಗಲೇ 2008 ರಿಂದ 2013 ರವರೆಗೆ ಬಿಜೆಪಿಯ ಆಡಳಿತ ವೈಖರಿಯನ್ನು ಕಂಡಿದ್ದೇವೆ" ಎಂದರು.
ರಾಜ್ಯ ವಿಧಾನಸಭೆ ಚುನಾವಣೆಯೊಂದ ನಿರಾಶರಾಗಿ ಯಾರೂ ಮನೆಯಲ್ಲಿ ಕುಳಿತಿರಬಾರದು ನಾವು ನಮ್ಮ ಹೋರಾಟ ಮುಂದುವರಿಸಬೇಕು. ಮುಂಬರುವ ಲೋಕಸಭೆ ಚುನಾವಣೆಗೆ ಹೋರಾಡಲು ಸಿದ್ದರಾಗಬೇಕು" ಅವರು ಕರೆ ನೀಡಿದ್ದಾರೆ.