ರೋಷನ್ ಬೇಗ್ 
ರಾಜಕೀಯ

ಮುಸ್ಲಿಂರಿಗೆ ಉಪಮುಖ್ಯಮಂತ್ರಿ ಸ್ಥಾನ ಬೇಡಿಕೆಗೆ ರೋಷನ್ ಬೇಗ್ ಬೆಂಬಲ

ಏಳು ಬಾರಿ ಶಾಸಕರಾಗಿರುವ ಶಿವಾಜಿನಗರದ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮುಸ್ಲಿಂ ಸಂಘಟನೆಗಳು ಮಾಡಿರುವ ಒತ್ತಾಯವನ್ನು ರೋಷನ್ ಬೇಗ್ ಬೆಂಬಲಿಸಿದ್ದಾರೆ.

ಬೆಂಗಳೂರು : ಏಳು ಬಾರಿ ಶಾಸಕರಾಗಿರುವ ಶಿವಾಜಿನಗರದ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ   ಮುಸ್ಲಿಂ ಸಂಘಟನೆಗಳು ಮಾಡಿರುವ  ಒತ್ತಾಯವನ್ನು ರೋಷನ್ ಬೇಗ್  ಬೆಂಬಲಿಸಿದ್ದಾರೆ.

  ಶಿವಾಜಿನಗರದಿಂದ ತಾವೂ ಏಳು ಬಾರಿ ಗೆದ್ದು ಶಾಸಕ, ಸಚಿವನಾಗಿ ಕಾರ್ಯನಿರ್ವಹಿದ್ದೇನೆ, ಇತರ ಸಮುದಾಯದ ಜನರು ಬೇಡಿಕೆ ಇಟ್ಟಿರುವಂತೆ ತಮ್ಮ ಸಮುದಾಯದ ನಾಯಕರು ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲಾ,  ತಾವೂ ಕೂಡಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು, ಹೈಕಮಾಂಡ್  ಎಲ್ಲವನ್ನೂ ಅಂತಿಮಗೊಳಿಸಲಿದೆ ಎಂದು ರೋಷನ್ ಬೇಗ್ ಹೇಳಿದ್ದಾರೆ.

ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಜೆಡಿಎಸ್ ನೊಂದಿಗೆ ಸೇರಿ ಸರ್ಕಾರ  ರಚನೆ ಮಾಡುತ್ತಿದೆ. ಹೆಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕರಿಸುತ್ತಿದ್ದಾರೆ.

 ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ  ಬಿ.ಎಸ್. ಯಡಿಯೂರಪ್ಪ ವಿಫಲರಾದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ  ಕುಮಾರಸ್ವಾಮಿ ಅವರನ್ನು ರಾಜ್ಯಪಾಲ ವಜೂಬಾಯಿ ವಾಲಾ ಶನಿವಾರ ಆಹ್ವಾನಿಸಿದ್ದರು. ನಾಳೆ  ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಂಡಿದೆ.






Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಬಂಗಾಳದಲ್ಲಿ CAA, UCC ತ್ವರಿತ ಅನುಷ್ಠಾನ; ಮಾತುವಾ, ನಮಸುದ್ರರಿಗೆ ಪೌರತ್ವ ನೀಡುತ್ತೇವೆ: ಪ್ರಧಾನಿ ಮೋದಿ

ಚಲಿಸುತ್ತಿದ್ದ ಐಶಾರಾಮಿ ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

SCROLL FOR NEXT