ಶಾಸಕರ ಚಿತ್ರ 
ರಾಜಕೀಯ

ನಾಳೆ ವಿಶ್ವಾಸ ಮತದ ಪರೀಕ್ಷೆ: ಇನ್ನೂ ಹೋಟೆಲ್ ಕೊಠಡಿಯಿಂದ ಹೊರಬಾರದ ಕಾಂಗ್ರೆಸ್, ಜೆಡಿಎಸ್ ಶಾಸಕರು

ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಗರದ ರೆಸಾರ್ಟ್ ವೊಂದರಲ್ಲಿ ಇರಿಸಲಾಗಿದೆ.

ಬೆಂಗಳೂರು : ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಗರದ  ರೆಸಾರ್ಟ್ ವೊಂದರಲ್ಲಿ ಇರಿಸಲಾಗಿದೆ.  ಚುನಾವಣೆಯಲ್ಲಿ ಆತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು  ಅವರ ಕುಟುಂಬದಿಂದ ದೂರ ಉಳಿದಿದ್ದಾರೆ.

ದೊಮ್ಮಲೂರಿನ  ಹಿಲ್ಟನ್ ಎಂಬೆಸಿ ಗಲ್ಪ್ ಲಿಂಕ್ಸ್ ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದರೆ,  ನಗರದ ಹೊರವಲಯ ದೇವನಹಳ್ಳಿಯ ಪ್ರಸ್ಟಿಜ್ ಗಲ್ಪ್ ಸೈರ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ವಿಶ್ವಾಸಮತ ಯಾಚನೆವರೆಗೂ ಶಾಸಕರು ರೆಸಾರ್ಟ್ ನಲ್ಲಿ ಇರುತ್ತಾರೆ. ಬಳಿಕ ಅವರ ಕುಟುಂದವರೊಂದಿಗೆ ಸೇರುತ್ತಾರೆ. ನಮ್ಮ ಶಾಸಕರ ನಂಬಿಕೆ ಮೇಲೆ ತಪ್ಪಾದ ಅನಿಸಿಕೆ ವ್ಯಕ್ತಪಡಿಸಲಾಗುತ್ತಿದೆ. ಪಕ್ಷದ ನಿರ್ಧಾರವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಶಾಸಕರ ಮೊಬೈಲ್ ಪೋನ್ ಕೂಡಾ ವಶಪಡಿಸಿಕೊಂಡಿದ್ದು, ಹೊರ ಜಗತ್ತಿನ ಸಂಪರ್ಕವೇ ಸಿಗದಂತೆ ಮಾಡಲಾಗಿದೆ. ಅವರಿಂದಲೇ ಪಡೆದು ಮನೆಯವರ ಜೊತೆ ಮಾತನಾಡಲಾಗುತ್ತದೆ. ವಿಶ್ವಾಸ ಮತ ಯಾಚನೆ ವೇಳೆ ಹೊಸ ಸರ್ಕಾರವನ್ನು ಬೀಳಿಸಲಾಗುತ್ತದೆ ಎಂದು ಕೆಲವರು ವದಂತಿ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

 ರೆಸಾರ್ಟ್ ಹೊರಗಡೆ ಯಾರೊಂದಿಗೂ ಮಾತನಾಡದಂತೆ ಶಾಸಕರನ್ನು ನಿರ್ಬಂಧಿಸಲಾಗಿದೆ. ವಿಶ್ವಾಸಮತ ಬಳಿಕ ಅವರ ಮನೆಗಳಿಗೆ ತೆರಳಲಿದ್ದಾರೆ. ಯಾರೂ ಮೊಬೈಲ್ ಪೋನ್ ಬಳಸುವಂತಿಲ್ಲ. ಆದರೆ, ಅವರ ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು  ಜೆಡಿಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಸದಾನಂದ ಹೇಳಿದ್ದಾರೆ.

ನೂತನ ಸಿಎಂ ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕರನ್ನು ಸಾಕಷ್ಟು ಬಿಗಿ ಭದ್ರತೆಯಲ್ಲಿ ವಿಧಾನಸೌಧದ ಬಳಿಗೆ ಕರೆತಂದು ಬಳಿಕ ರೆಸಾರ್ಟ್ ಹಾಗೂ ಹೋಟೆಲ್ ಗಳಿಗೆ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT