ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಪ್ರಚಾರ
ಬೆಂಗಳೂರು: ಬೆಂಗಳೂರು ನಗರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ. ಅಪಾರ್ಟ್ ಮೆಂಟ್ ಒಂದರಲ್ಲಿ 9,564 ಮತದಾರರ ಗುರುತು ಪತ್ರಗಳು ಪತ್ತೆಯಾದ ಬಳಿಕ ಮೇ 12ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿತ್ತು.
ರಾಜ್ಯದಲ್ಲಿ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುವ ಹೊರತಾಗಿಯೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕ ಸ್ಪರ್ಧೆಗಿಳಿದಿದೆ. ಕಾಂಗ್ರೆಸ್ ನ ಮುನಿರತ್ನ, ಜೆಡಿಎಸ್ ನಿಂದ ರಾಮಚಂದ್ರಪ್ಪ ಕಣದಲ್ಲಿದ್ದಾರೆ.ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಶನಿವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ.
ಮಾಜಿ ಕಾರ್ಪೊರೇಟರ್ ರಾಮಚಂದ್ರಪ್ಪ ಅವರು ಕಾಂಗ್ರೆಸ್ ನ ಮುನಿರತ್ನ ವಿರುದ್ಧ ತೀವ್ರ ಸ್ಪರ್ಧೆ ನೀಡುವ ಸಂಭವವಿದ್ದು ಬಿಜೆಪಿಯಿಂದ ಪಕ್ಷದ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು ಗೌಡ ಅಖಾಡದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುನೀರಾಜು ಗೌಡ ಅವರ ಪರವಾಗಿ ನಟಿ, ರಾಜಕಾರಣಿ ಶೃತಿ ಅವರೊಂದಿಗೆ ರೋಡ್ ಶೋ ನಡೆಸಿದ್ದಾರೆ.
2013 ರಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮುನಿರತ್ನ ಹಿರಿಯ ಕಾಂಗ್ರೆಸ್ ನಾಯಕರು ಕ್ಯಾಬಿನೆಟ್ ಹುದ್ದೆಗಳ ಕುರಿತು ಚರ್ಚಿಸಲು ತೆರಳಿರುವ ಸಮಯ ತಾವೇ ಸ್ವತಃಅ ಪ್ರಚಾರ ನಡೆಇಸಿದ್ದರು.
ಕ್ಷೇತ್ರದಲ್ಲಿ ನಾಳೆ ನಡೆಯುವ ಮತದಾನದ ಮತ ಎಣಿಕೆ ಕಾರ್ಯ ಮೇ 31ರಂದು ನಡೆಯಲಿದೆ.