ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಕಗ್ಗಂಟಾದ ರೈತರ ಸಾಲಮನ್ನಾ: ನಾನು ಪಲಾಯನವಾದಿ ಅಲ್ಲ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ: ಹೆಚ್‌ಡಿಕೆ

ತೀವ್ರ ಕುತೂಹಲ ಕೆರಳಿಸಿರುವ ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ಪಲಾಯನವಾದಿಯಲ್ಲ...

ಹೆಚ್ ಡಿ ಕುಮಾರಸ್ವಾಮಿ
Vishwanath S
Updated On : 30 May 2018, 1:44 am
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ಪಲಾಯನವಾದಿಯಲ್ಲ, ಚುನಾವಣಾ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇನೆ. ಡಿಸಿಎಂ ಪರಮೇಶ್ವರ್ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ ಹೇಳಿದ್ದಾರೆ. 
ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲಮನ್ನಾಗಾಗಿ ಬಳಕೆಯಾಗಲಿದೆ. ಆದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಖಾಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ ಎಂದು ಭರವಸೆ ನೀಡಿದರು. 
ರೈತರ ಸಾಲಮನ್ನಾ ಕುರಿತಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ರೈತ ಮುಖಂಡರ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 

Advertisement

Advertisement

ಸಾಲಮನ್ನಾ ಕುರಿತಂತೆ ರೈತ ಮುಖಂಡರು ಸಲಹೆ ನೀಡುವಂತೆ 
ಕುಮಾರಸ್ವಾಮಿ ಅವರು ನಡೆಸುತ್ತಿದ್ದ ಮಹತ್ವದ ಸಭೆಯಲ್ಲಿ ಕೆಲ ರೈತ ಮುಖಂಡರು ಸಂಪೂರ್ಣ ಸಾಲಮನ್ನಾ ಮಾಡುವಂತೆ ಪಟ್ಟುಹಿಡಿದಿದ್ದು ಈ ವೇಳೆ ರೈತರ ಮುಖಂಡರ ನಡುವೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 
ಸಭೆಯಲ್ಲಿ ರೈತರ ಮುಖಂಡರ ನಡುವೆ ಉಂಟಾದ ಗೊಂದಲಕ್ಕೆ ಗರಂ ಆದ ಕುಮಾರಸ್ವಾಮಿ ಅವರು ಸಲಹೆ ನೀಡುವಂತೆ ನಿಮ್ಮನ್ನು ಕರೆದರೆ ನೀವು ನೀವೇ ಜಗಳ ಮಾಡುತ್ತಿದ್ದೀರಾ? ಹೀಗಾದರೆ ಒಮ್ಮತ ಅಭಿಪ್ರಾಯಕ್ಕೆ ಬರುವುದಕ್ಕೆ ಕಷ್ಟವಾಗುತ್ತದೆ. ನಿಮ್ಮಲ್ಲೇ ತಾರತಮ್ಯ ಇದ್ದರೆ ನನಗೆ ಏನು ಸಲಹೆ ನೀಡುತ್ತೀರೆ ಎಂದು ಪ್ರಶ್ನಿಸಿದರು.  
ಯಶಸ್ವಿನಿ ಯೋಜನೆ ಮೇ 31ಕ್ಕೆ ಮುಗಿದಿದೆ. ಈ ಸಂಬಂಧ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಯಶಸ್ವಿನಿ ಯೋಜನೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕುಮಾರಸ್ವಾಮಿ ಹೇಳಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement