ಶ್ರೀರಾಮುಲು 
ರಾಜಕೀಯ

ನಾನು 420 ಅಲ್ಲ,108 ಮತ್ತು ಸಿದ್ದರಾಮಯ್ಯನಷ್ಟು ಬುದ್ದಿವಂತನೂ ಅಲ್ಲ: ಶ್ರೀರಾಮುಲು

ನಾನು 420 ಅಲ್ಲ. 108 ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತ ಅಲ್ಲ ಎಂದು...

ಬಳ್ಳಾರಿ: ನಾನು 420 ಅಲ್ಲ. 108 ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತ ಅಲ್ಲ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಗುರುವಾರ ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರು ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ. ನಾನು ಮಾತನಾಡುವುದು ಗ್ರಾಮೀಣ ಸೊಗಡಿನ ಕನ್ನಡ, ನಾನು ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತನಲ್ಲ, ದಡ್ಡ ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಅಂದರು.
ಸಿದ್ದರಾಮಯ್ಯ ಅವರು ನನ್ನನ್ನು 420 ಎಂದು ಕರೆದರು. ಆದರೆ ಈ ರಾಜ್ಯದ ಜನ ನನ್ನನ್ನು 108 ಶ್ರೀರಾಮುಲು ಅಂತ ಕರೆಯುತ್ತಾರೆ. ಬಡವರಿಗಾಗಿ ವಿಶೇಷ ಅಂಬುಲೆನ್ಸ್‌ ವ್ಯವಸ್ಥೆ ನಾನು ಮಾಡಿಸಿದ್ದನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರು.
2004ರ ಮುಂಚೆ ಬಳ್ಳಾರಿ ಹೇಗಿತ್ತು, ಈಗ ಹೇಗಾಗಿದೆ? ಎಂದು ಪ್ರಶ್ನಿಸಿದ ಶ್ರೀರಾಮುಲು,  ಅಭಿವೃದ್ಧಿ ಆಗಿದೆ ಅಂತಾ ಬಳ್ಳಾರಿ ಜನಾನೇ ಮಾತಾಡ್ತಿದ್ದಾರೆ. 500 ಕೋಟಿ ರುಪಾಯಿ ಖರ್ಚು ಮಾಡಿ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಮಾಡಿದ್ದೇವೆ. ಆದರೆ ಬಡಾಯಿ ಕೊಚ್ಚಿಕೊಳ್ಳುವ ಈ  ಸರ್ಕಾರ 500 ಕೋಟಿ ರುಪಾಯಿ ಅನುದಾನವನ್ನು ಬಳ್ಳಾರಿ ಜಿಲ್ಲೆಗೆ ಕಡಿತ ಮಾಡಿ ಅವಮಾನ ಮಾಡಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!