ರಾಮನಗರದಲ್ಲಿ ಬುಧವಾರ ಚಂದ್ರಶೇಖರ್ ಪ್ರಚಾರ
ರಾಮನಗರ: ರಾಮನಗರ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಎಲ್ ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿ ಆಂತರಿಕ ಭಿನ್ನಮತವನ್ನು ಬಹಿರಂಗ ಪಡಿಸಿದ್ದಾರೆ.
ಕಣದಿಂದ ಹಿಂದೆ ಸರಿದು ವಾಪಸ್ ಕಾಂಗ್ರೆಸ್ ಸೇರಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಬಿಜೆಪಿಗೆ ದೊಡ್ಡ ಅವಮಾನವಾಗಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ಜರುಗಿಸುವ ನಿರೀಕ್ಷೆಯಿದೆ,.
ಕಳೆದ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಹುಮತ ಸಾಬೀತು ಪಡಿಸದೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪದೇ ಪದೇ ಪಕ್ಷದ ಬಿರುಕುಗಳು ಬಹಿರಂಗ ಗೊಳ್ಳುತ್ತಿವೆ.
ಸದ್ಯ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಒಗ್ಗಟ್ಟಿನ ಕೊರತೆ ಎದುರಿಸುತ್ತಿದೆ. ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಪ್ರಚಾರದಲ್ಲಿ ಭಾಗವಹಿಸುವುದೇ ಅಪರೂಪವಾಗಿದೆ, ಕೇವಲ ಯಡಿಯೂರಪ್ಪ ಈಶ್ವರಪ್ಪ. ಅರವಿಂದ ಲಿಂಬಾವಳಿ, ಶ್ರೀರಾಮುಲು, ಸಿ,ಟಿ ರವಿ, ಶೋಭಾ ಕರಂದ್ಲಾಜೆ ಮಾತ್ರ ಸಕ್ರಿಯರಾಗಿದ್ದಾರೆ. ಉಳಿದಂತೆ ಆರ್ ,ಅಶೋಕ್ ಮತ್ತು ಡಿ,ವಿ ಸದಾನಂದಗೌಡ ಕೆಲವು ಕಡೆ ಮಾತ್ರ ಪ್ರಚಾರ ಕೈಗೊಂಡಿದ್ದಾರೆ.
ಯಡಿಯೂರಪ್ಪ ಶಿವಮೊಗ್ಗದಲ್ಲಿ ತಮ್ಮ ಪುತ್ರನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಸಾಮೂಹಿಕ ನಾಯಕತ್ವದ ಕೊರತೆ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಾದ ಸಿಎಂ ಕುಮಾರ ಸ್ವಾಮಿ, ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿ,ಕೆ ಶಿವಕುಮಾರ್ ಅವರ ಪ್ರಚಾರದ ಮುಂದೆ ಬಿಜೆಪಿ ಮಂಕಾದಂತೆ ಕಾಣುತ್ತಿದೆ,.
ರಾಮನಗರ ಅಭ್ಯರ್ಥಿ ನಿರ್ಧಾರದಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆಯಿದೆ, ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ನಡೆಯಬೇಕಿದೆ ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಹೇಳಿದ್ದಾರೆ,
ಕೇವಲ ಮೂರು ವಾರಗಳ ಹಿಂದಷ್ಟೇ ಕಾಂಗ್ರೆಸ್ ಎಂಎಲ್ ಸಿ ಸಿಎಂ ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕರೆತರಲಾಗಿತ್ತು, ಹಾಗೂ ರಾಮನಗರ ಉಪಚುನಾವಣೆಗೆ ಟಿಕೆಟ್ ನೀಡಲಾಗಿತ್ತು, ಆದರೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಹಲವು ದಶಕಗಳಿಂದ ಪಕ್ಷಕ್ಕೆ ದುಡಿದ ಹಲವು ಆಕಾಂಕ್ಷಿಗಳಿದ್ದರು, ಅವರನ್ನು ಕಡೆಗಣಿಸಿದ್ದು ಬಿಜೆಪಿಗೆ ಮುಳುವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮನಗರ ರಾಜಕೀಯ ಬೆಳವಣಿಗೆ ಬಿಜೆಪಿ ರಾಷ್ಟ್ರಮಟ್ಟದ ನಾಯಕರನ್ನು ರಾಜ್ಯ ನಾಯಕತ್ವದ ಮೇಲೆ ಆಕ್ರೋಶಗೊಳ್ಳುವಂತೆ ಮಾಡಿದೆ, ಯಡಿಯೂರಪ್ಪ ಅವರ ನಾಯಕತ್ವವನ್ನು ಕೇಂದ್ರ ನಾಯಕರು ಪ್ರಶ್ನಿಸುವಂತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos