ರಾಮನಗರ/ಬಳ್ಳಾರಿ: ರಾಮನಗರ ಜಿಲ್ಲೆಯ ಮೊಟ್ಟದೊಡ್ಡಿಯ 179ನೇ ಬೂತ್ ನಲ್ಲಿ ಹಾವು ಕಾಣಸಿಕೊಂಡ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು,
ನಂತರ ಅಲ್ಲಿನ ಸಿಬ್ಬಂದಿ ಹಾವನ್ನು ಓಡಿಸಿದ ನಂತರ ಮತದಾನ ಆರಂಭವಾಯಿತು, ಹಾವು ಓಡಿಸುವವರೆಗೂ ಮತದಾನ ಪ್ರಕ್ರಿಯೆ ವಿಳಂಭವಾಗಿತ್ತು.
ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಯಲ್ಲಿ ಜಿಲ್ಲೆಯ ಹರಗಿನಧೋಣಿ ಗ್ರಾಮದ ಜನತೆ ಮತದಾನ ಬಹಿಷ್ಕರಿಸಿದ್ದಾರೆ.
ಶಾಶ್ವತ ಕುಡಿಯುವ ನೀರಿಸ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು, ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಗ್ರಾಮಸ್ಥರ ಮನವೊಲಿಸಿದ್ದಾರೆ