ಜಗದೀಶ್ ಶೆಟ್ಟರ್ 
ರಾಜಕೀಯ

ರಾಮನಗರ ಘಟನೆ ನಮಗೆ ಪಾಠ: ಸಮ್ಮಿಶ್ರ ಪಕ್ಷಗಳಿಗೆ ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಬರಲಿದೆ: ಶೆಟ್ಟರ್

ರಾಮನಗರ ಘಟನೆಗೆ ಇಡೀ ರಾಜ್ಯ ಬಿಜೆಪಿ ಘಟಕ ಜವಾಬ್ದಾರಿಯಾಗಿದ್ದು, ಇದರಿಂದ ಬಿಜೆಪಿ ಪಾಠ ಕಲಿತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ....

ಹುಬ್ಬಳ್ಳಿ: ರಾಮನಗರ ಘಟನೆಗೆ ಇಡೀ ರಾಜ್ಯ ಬಿಜೆಪಿ ಘಟಕ ಜವಾಬ್ದಾರಿಯಾಗಿದ್ದು, ಇದರಿಂದ ಬಿಜೆಪಿ ಪಾಠ ಕಲಿತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ವಿಶೇಷ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಈ ಘಟನೆಗೆ ಯಾವುದೇ ಒಬ್ಬ ವ್ಯಕ್ತಿ ಕಾರಣವಲ್ಲ,  ಇದು ಸಾಮೂಹಿಕ್ ಹೊಣೆಗಾರಿಕೆ, ಇಡೀ ಬಿಜೆಪಿ ರಾಜ್ಯ ಘಟಕ ಇದರ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದಾರೆ.
ಈ ಮೊದಲು ಪಕ್ಷ ಅಲ್ಲಿ ನಿಷ್ಠಾವಂತರನ್ನು ಗುರುತಿಸಲು ವಿಫಲವಾಯಿತು,.ಕರ್ನಾಟಕದ ಚುನಾವಣೆಯ ಇತಿಹಾಸದಲ್ಲಿ ಎಂದಿಗೂ ಈ ರೀತಿ
ಆಗಿರಲಿಲ್ಲ, ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ.
ಈ ರೀತಿಯ ಅಭ್ಯರ್ಥಿಗಳ ಬಗ್ಗೆ ಭವಿಷ್ಯದಲ್ಲಿ ನಾವು ಎಚ್ಚರಿಕೆಯಿಂದ ಇರುತ್ತೇವೆ,ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಭವಿಷ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಅನುಭವಿಸಲಿವೆ ಎಂದು ಹೇಳಿದ್ದಾರೆ. 
ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಾಮನಗರದಲ್ಲಿ ಪ್ರಚಾರ ಕೈಗೊಂಡಿದ್ದರು. ಅವರ ಗೆಲುವಿಗಾಗಿ ಎಲ್ಲರೂ ಶ್ರಮಿಸುತ್ತಿದ್ದರು ಆದರೆ ಕಾಣವಿಲ್ಲದೇ ಅವರು ಪಕ್ಷಾಂತರ ಮಾಡಿದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

SCROLL FOR NEXT