ರಾಜಕೀಯ

2019ರ ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬೆಸ್ಟ್ ಕ್ಯಾಂಡಿಡೇಟ್!

Shilpa D
ಬೆಂಗಳೂರು: 1996 ರಿಂದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸತತವಾಗಿ ದಿವಂಗತ ಅನಂತ್ ಕುಮಾರ್ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಅವರ ಸಾವಿನ ನಂತರ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಮೂಡಿದೆ.
ಲೋಕಸಭೆ ಚುನಾವಣೆ ಇನ್ನೂ ಕೆಲವೇ ತಿಂಗಳು ಬಾಕಿಯಿದ್ದು, ಅನಂತ್ ಪತ್ನಿ ಸಾಮಾಜಿಕ ಕಾರ್ಯಕರ್ತೆ ಡಾ.ತೇಜಸ್ವಿನಿ,  ಅನಂತ್ ಕುಮಾರ್ ಅವರ ಉತ್ತರಾಧಿಕಾರಿಯಾಗಿದ್ದಾರೆ, ತೇಜಸ್ವಿನಿ ಪಕ್ಷದ ಕೇಡರ್ ನಲ್ಲಿ ಹಾಗೂ ಕ್ಷೇತ್ರದಲ್ಲಿ ತುಂಬಾ ಚಿರಪರಿಚಿತರಾಗಿದ್ದಾರೆ, ಹೀಗಾಗಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ತೇಜಸ್ವಿನಿ ಮಾದರಿ ಅಭ್ಯರ್ಥಿಯಾಗಿದ್ದಾರೆ.
ಎಂಜನೀಯರ್ ಪದವೀಧರೆಯಾಗಿರುವ ತೇಜಸ್ವಿನಿ, ಮಾಜಿ ವಿಜ್ಞಾನಿ ಕೂಡ ಆಗಿದ್ದಾರೆ, ಅದಮ್ಯ ಚೇತನ ಎಂಬ ಸಂಘಟನೆ ಮೂಲಕ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಜೊತೆಗೆ ಬಿಜೆಪಿ ಎಲ್ಲಾ ಮುಖಂಡರು ತೇಜಸ್ವಿನಿ ಅವರ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಅನಂತ್ ಕುಮಾರ್ ಕ್ಷೇತ್ರಕ್ಕೆ ತೇಜಸ್ವಿನಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
SCROLL FOR NEXT