ಬಿಎಸ್ ಯಡಿಯೂರಪ್ಪ, ಸಂತೋಷ್ 
ರಾಜಕೀಯ

ರಾಜ್ಯ ಬಿಜೆಪಿಯಲ್ಲಿ ಅನಂತ್ ಕುಮಾರ್ ಸ್ಥಾನ ತುಂಬುತ್ತಾರಾ ಬಿಎಲ್ ಸಂತೋಷ್?

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ...

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ ರಾಜ್ಯ ಬಿಜೆಪಿ ಘಟಕಕ್ಕೆ ತುಂಬಲಾರದ ನಷ್ಟವಾಗಿದೆ. 
ಅತ್ಯಂತ ಕಡಿಮೆ ಅವಧಿಯಲ್ಲೇ ಅನಂತ್ ಕುಮಾರ್ ಅವರ ಸ್ಥಾನ ತುಂಬುವಂತಹ ಪ್ರಭಾವಿ, ಆರ್ ಎಸ್ ಎಸ್ ಒಪ್ಪಿಕೊಳ್ಳುವಂತಹ ವ್ಯಕ್ತಿಯ ಹುಡುಕಾಟದಲ್ಲಿರುವ ಕೇಸರಿ ಪಡೆಯ ಕಣ್ಣು ಸದ್ಯ ಆರ್ ಎಸ್ ಎಸ್ ವ್ಯಕ್ತಿ ಬಿಎಲ್ ಸಂತೋಷ್ ಅವರ ಮೇಲೆ ಬಿದ್ದಿದೆ. 
ಬಿಎಲ್ ಸಂತೋಷ್ ಅವರು ಈಗ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದು, ಅವರನ್ನು ಪಕ್ಷ ಸಂಘಟನೆ ಕಾರ್ಯದಿಂದ ಮುಕ್ತಗೊಳಿಸಿ ಸಕ್ರಿಯೆ ರಾಜಕೀಯಕ್ಕೆ ತರುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಮಾತ್ರವಲ್ಲ ಸಂಘದಲ್ಲೂ ಎರಡು ಹುದ್ದೆಯನ್ನು ಹೊಂದುವಂತಿಲ್ಲ. ಸಂತೋಷ್ ಅವರು ಸದ್ಯ ಸಂಘಟನಾ ಜವಾಬ್ದಾರಿ ಹೊಂದಿದ್ದಾರೆ. ಅವರಿಗೆ ಯಾವುದೇ ರಾಜಕೀಯ ಜವಾಬ್ದಾರಿ ನೀಡಿಲ್ಲ. ಸದ್ಯದಲ್ಲೇ ಅವರಿಗೆ ಹೊಸ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಅಂದು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿಎಲ್ ಸಂತೋಷ್ ನಡುವೆ ತಿಕ್ಕಾಟ ನಡೆದಿತ್ತು. ಬೆಳವಣಿಗೆಗಳ ನಂತರ ಸಂತೋಷ್ ಅವರನ್ನು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಉಸ್ತುವಾರಿ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ