ಅಂಬರೀಶ್ 
ರಾಜಕೀಯ

ಸೋನಿಯಾಗೆ ಅಂಬರೀಶ್ ವಿಧಿಸಿದ್ದ ಷರತ್ತು, ಎಸ್ಎಂ ಕೃಷ್ಣ ಸಿಎಂ ಆಗಿದ್ದು, ಏನಿದು ರೋಚಕ ಸಂಗತಿ!

ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಕಾಂಗ್ರೆಸ್ ಗೆ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸೋನಿಯಾಗಾಂಧಿ ಅವರಿಗೆ ಷರತ್ತು ವಿಧಿಸಿದ್ದರು...

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಕಾಂಗ್ರೆಸ್ ಗೆ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಷರತ್ತು ವಿಧಿಸಿದ್ದರು.
ಹೌದು ಅಂಬರೀಶ್ ಅವರು ಹೀಗೊಂದು ಷರತ್ತನ್ನು ಸೋನಿಯಾ ಗಾಂಧಿಗೆ ಹಾಕಿದ್ದರು. ಅದಕ್ಕೆ ಸೋನಿಯಾ ಸಹ ಒಪ್ಪಿಕೊಂಡಿದ್ದರು ಎಂದು ಸಿವಿ ಶೈಲಜಾ ಸಂಪಾದಕತ್ವದಲ್ಲಿ ಹೊರ ಬಂದಿರುವ ಅಂಬರೀಶ್ ಅಭಿನಂದನಾ ಗ್ರಂಥದ ಕನ್ನಡ ಭಾಗದಲ್ಲಿ ಸ್ವತಃ ಅಂಬರೀಶ್ ಅವರೇ ನೀಡಿರುವ ಹೇಳಿಕೆಯನ್ನು ದಾಖಲಿಸಿದ್ದಾರೆ. 
1999ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂಎಸ್ ಕೃಷ್ಣ ಪಾಂಚಜನ್ಯ ಮೊಳಗಿಸಲು ರೆಡಿಯಾಗಿದ್ದರು. ಈ ಸಮಯದಲ್ಲಿ ಜನತಾದಳದಲ್ಲಿ ಎಸ್ ಡಿ ಜಯರಾಂ ಗರಡಿಯಲ್ಲಿ ಪ್ರಬಲ ರಾಜಕೀಯ ನಾಯಕರಾಗಿ ಬೆಳೆಯುತ್ತಿದ್ದ ಅಂಬರೀಶ್ ಅವರನ್ನು ಖುದ್ದು ಕೃಷ್ಣ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು. 
ಕೃಷ್ಣ ಅವರ ಆಹ್ವಾನಕ್ಕೆ ಒಪ್ಪಿದ ಅಂಬರೀಶ್ ಅವರು ಸೋನಿಯಾಗಾಂಧಿ ಮುಂದೆ ಒಂದು ಷರತ್ತು ಇಟ್ಟಿದ್ದರು. ಅದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಂಡ್ಯ ಜಿಲ್ಲೆಯವರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ಒಪ್ಪಿದರೆ ನಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಷರತ್ತು ಹಾಕಿದ್ದರು. ಅದಕ್ಕೆ ಸೋನಿಯಾ ಕೂಡ ಒಪ್ಪಿದ್ದರು. 
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು. ಅಂಬರೀಶ್ ಗೆ ಕೊಟ್ಟ ಮಾತಿನಂತೆ ಸೋನಿಯಾಗಾಂಧಿ ಎಸ್ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ? ಸುಳಿವು ಕೊಟ್ಟ ಸಿಎಂ ಡಿಕೆ ಶಿವಕುಮಾರ್!

'UPI ಪಾವತಿ ಸ್ವೀಕರಿಸಲ್ಲ.. ಕ್ಯಾಶ್‌ ಕೊಡಿ': ಅಂಗಡಿಗಳ ಮುಂದೆ ಬೋರ್ಡ್ ಹಾಕಿದ ವ್ಯಾಪಾರಿಗಳು!

ಬಂಗಾಳ Bypoll, ಕ್ಷಣಕ್ಕೊಂದು ತಿರುವು: ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಮಳೆರಾಯನ ಮುನಿಸು: ದೇಶದಲ್ಲಿ ಶೇ.14.88ರಷ್ಟು ಮುಂಗಾರು ಕೊರತೆ!

ಟೂರಿಂಗ್ ಟಾಕೀಸ್ ಟೀಕೆ: ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ; ಅಶೋಕಣ್ಣ ಲೇಜಿ, ಯೂಸ್ ಲೆಸ್ ಸ್ಟಾರ್; ಸಚಿವ ಹೆಚ್.ಸಿ ಬಾಲಕೃಷ್ಣ ತಿರುಗೇಟು