ಸಾಂದರ್ಭಿಕ ಚಿತ್ರ 
ರಾಜಕೀಯ

ಉಪ ಚುನಾವಣಾ ಕಣ: 64 ಮಂದಿ ಕಾಂಗ್ರೆಸ್ ಕಲಿಗಳ ಹೆಗಲಿಗೆ ಬಳ್ಳಾರಿ ಉಸ್ತುವಾರಿ !

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ಪಾಲಿಗೆ ರಾಜ್ಯ ಉಪ ಚುನಾವಣಾ ಕಣ ಪ್ರತಿಷ್ಠೆಯ ವಿಷಯವಾಗಿದೆ, 1999 ರಲ್ಲಿ ಬಳ್ಳಾರಿ ...

ಬೆಂಗಳೂರು: ಸಮ್ಮಿಶ್ರ  ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ಪಾಲಿಗೆ ರಾಜ್ಯ ಉಪ ಚುನಾವಣಾ ಕಣ ಪ್ರತಿಷ್ಠೆಯ ವಿಷಯವಾಗಿದೆ, 1999 ರಲ್ಲಿ ಬಳ್ಳಾರಿ ಲೋಕಸಭೆಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು.
ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾರೆ.  ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲಲು ಶಿವಕುಮಾರ್ ಎಲ್ಲಾ ರೀತಿಯ ರಣ ತಂತ್ರಗಳನ್ನು ಹೆಣೆಯುತ್ತಿದ್ದಾರೆ,
ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಪರಿಗಣಿಸಲಾಗಿರವ ಡಿ.ಕೆ ಶಿವಕುಮಾರ್ ಸೇರಿದಂತೆ ಶಾಸಕರು, ಹಿರಿಯ ಮುಖಂಡರು ಸೇರಿದಂತೆ ಒಟ್ಟು 64 ಮಂದಿ ಬಳ್ಳಾರಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೋಳ್ಳಲಿದ್ದಾರೆ.
ಬಳ್ಳಾರಿಯಲ್ಲಿ ಜೆ, ಶಾಂತಾ ಮತ್ತು ಕಾಂಗ್ರೆಸ್ ಉಗ್ರಪ್ಪ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಳ್ಳಾರಿಯ 8 ವಿಧಾನಸಭೆ ಕ್ಷೇತ್ರಗಳಿಗೂ ಆರು ಸಚಿವರು ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳ ಹೊಣೆ ತೆಗೆದುಕೊಂಡಿದ್ದಾರೆ,
ಕೂಡ್ಲಿಗಿ-ರಮೇಶ್ ಜಾರಕಿಹೊಳಿ, ಹಗರಿ ಬೊಮ್ಮನಹಳ್ಳಿ,- ಶಿವಶಂಕರ್ ರೆಡ್ಡಿ, ಬಳ್ಳಾರಿ ಗ್ರಾಮಾಂತರ -ಕೃಷ್ಣ ಭೈರೇಗೌಡ, ಸಂಡೂರು- ಪ್ರಿಯಾಂಕ್ ಖರ್ಗೆ, ಬಳ್ಳಾರಿ ನಗರ- ಯುಟಿ ಖಾದರ್, ಹಡಗಲಿ- ರಾಜಶೇಖರ್ ಪಾಟೀಲ್  ವಹಿಸಿಕೊಂಡಿದ್ದಾರೆ.
ಮಾಜಿ ಸಚಿವ  ಶರಣ ಪ್ರಕಾಶ್ ಪಾಟೀಲ, ವಿಜಯನಗರ ಹಾಗೂ ಎಂಪಿ ಧ್ರವ ನಾರಾಯಣ ಉಸ್ತುವಾರಿ ತೆಗೆದುಕೊಂಡಿದ್ದಾರೆ.
ಜಾರಕಿ ಹೊಳಿ ಸಹೋದರರು ಮತ್ತು ಡಿ.ಕೆ ಶಿವಕುಮಾರ್  ಒಬ್ಬರಿಗೊಬ್ಬರು ಮುಖ ನೋಡಲು ಬಯಸುತ್ತಿರಲಿಲ್ಲ, ಆದರೆ  ಬಳ್ಳಾರಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್